Thursday, March 26, 2026
Google search engine

Homeರಾಜ್ಯಸರ್ಕಾರದ ವಿರೋಧದ ನಡುವೆಯೂ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಗವರ್ನರ್ ಉದ್ಘಾಟನೆ

ಸರ್ಕಾರದ ವಿರೋಧದ ನಡುವೆಯೂ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಗವರ್ನರ್ ಉದ್ಘಾಟನೆ

ಮೈಸೂರು : ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ನೀಡಿರುವ ನಿರ್ದೇಶನದ ವಿವಾದದ ನಡುವೆಯೇ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಬುಧವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ ಸಂಬಂಧಿತ ‘ಏಕಾತ್ಮ ಮಾನವ ದರ್ಶನ – ಭಾರತದ ವಿಶ್ವದೃಷ್ಟಿ’ ಕುರಿತ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿದರು.

ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ತಿಳಿಸದೆ ಮಾ.25 ರಿಂದ 27ರವರೆಗೆ ಆಯೋಜಿಸಲಾಗಿದ್ದ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರ KSOU ಅಧಿಕಾರಿಗಳಿಗೆ ಮತ್ತು ಕಾರ್ಯಕ್ರಮ ಸಂಘಟಕರಿಗೆ ನಿರ್ದೇಶನ ನೀಡಿತ್ತು. ರಾಜ್ಯ ಸರ್ಕಾರದ ನಿರ್ದೇಶನದ ಹೊರತಾಗಿಯೂ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ದೀನದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವ ದರ್ಶನ (ಸಮಗ್ರ ಮಾನವತಾವಾದ) ಎಂಬ ಪರಿಕಲ್ಪನೆಯು ಕೇವಲ ತಾತ್ವಿಕ ಕಲ್ಪನೆಯಲ್ಲ. ಅದು ಭಾರತದ ಆತ್ಮ, ಸಂಸ್ಕೃತಿ, ಚಿಂತನೆ ಮತ್ತು ಜೀವನ ವಿಧಾನದ ಮೂಲತತ್ವವಾಗಿದೆ ಎಂದು ಹೇಳಿದರು.

ಮುಂದುವರೆದು, ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಮೌಲ್ಯಗಳಲ್ಲಿ ಬೇರೂರಿರುವ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ ಎಂದರಲ್ಲದೆ, ಭಾರತವು ತನ್ನ ಶ್ರೀಮಂತ ನಾಗರಿಕತೆ ಮತ್ತು ಕಾಲಾನಂತರದಲ್ಲಿ ಮಹಾನ್ ಚಿಂತಕರು ಮತ್ತು ನಾಯಕರಿಂದ ರೂಪಿಸಲ್ಪಟ್ಟ ಸಾಂಸ್ಕೃತಿಕ ಪರಂಪರೆಗೆ ಜಾಗತಿಕ ಮನ್ನಣೆಯನ್ನು ಗಳಿಸಿದೆ ಎಂದು ತಿಳಿಸಿದರು.

ದೀನದಯಾಳ್ ಉಪಾಧ್ಯಾಯ ಅವರನ್ನು ಒಬ್ಬ ಉತ್ತಮ ಸಂಘಟಕ, ತತ್ವಜ್ಞಾನಿ, ವಾಗ್ಮಿ ಮತ್ತು ಅರ್ಥಶಾಸ್ತ್ರಜ್ಞ ಎಂದು ಉಲ್ಲೇಖಿಸಿದ ರಾಜ್ಯಪಾಲರು, ಆರು ದಶಕಗಳ ಹಿಂದೆ ಪ್ರತಿಪಾದಿಸಲಾದ ಸಮಗ್ರ ಮಾನವತಾವಾದದ ಸಿದ್ಧಾಂತವು ವ್ಯಕ್ತಿ, ಸಮಾಜ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಒತ್ತಿಹೇಳುವ ಸಮಗ್ರ ಚೌಕಟ್ಟನ್ನು ನೀಡುತ್ತದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular