Monday, May 26, 2025
Google search engine

Homeರಾಜಕೀಯಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ: ಶಾಸಕ ರಮೇಶ ಜಾರಕಿಹೊಳಿ

ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ: ಶಾಸಕ ರಮೇಶ ಜಾರಕಿಹೊಳಿ

ಬೆಳಗಾವಿ: ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನವಾಗಲಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ‌ಸ್ಪೋಟಕ‌ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ರಾಜಕಾರಣದಿಂದಲೇ ಸರ್ಕಾರ ಪತನವಾಗಲಿದೆ. ಎಚ್‌ ಡಿಕೆ‌ ಜೊತೆಗೆ ಆಪ್ತನಾಗುತ್ತಿರುವುದಕ್ಕೆ‌ ಡಿಕೆಶಿ ‌ನನ್ನ ವಿರುದ್ಧ ಹುನ್ನಾರ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರಲ್ಲ. ಡಿಕೆಶಿ ‌ಇರುವ ಸರ್ಕಾರ ಯಾವಾಗಲೂ ಡೇಂಜರ್. ಡಿಕೆಶಿ ‌ಅಧಿಕಾರ ಇದ್ದಾಗ ಒಂದು ರೀತಿಯಾಗಿರುತ್ತಾರೆ, ಪ್ರತಿಪಕ್ಷದಲ್ಲಿದ್ದಾಗ ಒಂದು ರೀತಿ ಇರುತ್ತಾರೆ ಎಂದು ‌ಗುಡುಗಿದರು.

ಒಂದೇ‌ ರಾತ್ರಿಯಲ್ಲಿ ಬೆಳವಣಿಗೆ ‌ಆಗಿ ಸರ್ಕಾರ‌ ಪತನವಾಗಲಿದೆ. ಆಪರೇಷನ್ ‌ಕಮಲ ಮಾಡಲ್ಲ, ಅಷ್ಟು ‌ಸಣ್ಣ ಮಾತು‌ ನಾನು ಮಾತನಾಡಲ್ಲ. ಡಿಕೆಶಿ ‌ಶೀಘ್ರವೇ ಮಾಜಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

ಡಿಕೆಶಿ ‌ಜೈಲಿಗೆ ಹೋಗ್ತಾರಾ? ಎಂಬ ಪ್ರಶ್ನೆಗೆ ಆ ಬಗ್ಗೆ ನಾನು ಮಾತನಾಡಲ್ಲ, ನಿನ್ನೆಯೂ ಜಗದೀಶ್ ಶೆಟ್ಟರ ಭೇಟಿ‌ ಮಾಡಿ ಬಂದಿರುವೆ. ಡಿಕೆಶಿ ‌ಸಿಡಿ ಮಾಸ್ಟರ್, ಅದೇ ಅವರ ಶಕ್ತಿ. ಸಿಡಿ ಇಟ್ಟುಕೊಂಡೇ ಡಿಕೆಶಿ ‌ರಾಜಕಾರಣ ಮಾಡುತ್ತಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular