Friday, January 9, 2026
Google search engine

Homeರಾಜ್ಯಕೈದಿಗಳ ಕೂಲಿ ಹಣಕ್ಕೆ ಸರ್ಕಾರ ನಿರ್ಲಕ್ಷ್ಯ 10 ತಿಂಗಳಿಂದ ಕೈದಿಗಳ ಕೂಲಿ ಬಾಕಿ

ಕೈದಿಗಳ ಕೂಲಿ ಹಣಕ್ಕೆ ಸರ್ಕಾರ ನಿರ್ಲಕ್ಷ್ಯ 10 ತಿಂಗಳಿಂದ ಕೈದಿಗಳ ಕೂಲಿ ಬಾಕಿ

ಬೆಳಗಾವಿ : ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ 200ಕ್ಕೂ ಹೆಚ್ಚು ಕೈದಿಗಳಿಗೆ ಕಳೆದ 10 ತಿಂಗಳಿಂದ ಕೂಲಿ ಹಣ ಸಿಕ್ಕಿಲ್ಲ. ಸರ್ಕಾರವು ದಿನಗೂಲಿಯಾಗಿ 524 ರೂಪಾಯಿ ನಿಗದಿಪಡಿಸಿದ್ದು, ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳು ಜೈಲಿನೊಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವೇತನವು ಕೈದಿಗಳ ಕುಟುಂಬಗಳಿಗೆ ಆರ್ಥಿಕ ಸಹಾಯವಾಗುತ್ತದೆ ಮತ್ತು ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ.

ಸದ್ಯ ಬೆಳಗಾವಿ ಜೈಲಿನಲ್ಲಿ ಮಾತ್ರ ಮೂರು ಕೋಟಿ ರೂಪಾಯಿಗೂ ಹೆಚ್ಚು ಕೂಲಿ ಹಣ ಬಾಕಿ ಉಳಿದಿದೆ. ಹಿಂಡಲಗಾ ಜೈಲು ಮಾತ್ರವಲ್ಲದೆ ರಾಜ್ಯದ ಇತರೆ ಜೈಲುಗಳಲ್ಲಿಯೂ ಇಂತಹದೇ ಸಮಸ್ಯೆ ಇದೆ ಎಂದು ವರದಿಯಾಗಿದೆ. ಸರ್ಕಾರಿ ಗ್ಯಾರಂಟಿ ಯೋಜನೆಗಳ ಹೊರೆಯಿಂದಾಗಿ ಈ ವೇತನ ಪಾವತಿಯಲ್ಲಿ ವಿಳಂಬವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೈದಿಗಳು ಮತ್ತು ಜೈಲು ಅಧಿಕಾರಿಗಳು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದರೂ, ಹಣ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಕೈದಿಗಳು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular