Tuesday, February 10, 2026
Google search engine

Homeರಾಜ್ಯಬರಕಾ ಅಂತರರಾಷ್ಟ್ರೀಯ ಶಾಲೆ ಮತ್ತು ಕಾಲೇಜಲ್ಲಿ ವಿಜೃಂಭಣೆಯ ಪ್ರೆಫ್ -ಗ್ರಾಜ್ಯುಯೇಷನ್ ಸಮಾರಂಭ

ಬರಕಾ ಅಂತರರಾಷ್ಟ್ರೀಯ ಶಾಲೆ ಮತ್ತು ಕಾಲೇಜಲ್ಲಿ ವಿಜೃಂಭಣೆಯ ಪ್ರೆಫ್ -ಗ್ರಾಜ್ಯುಯೇಷನ್ ಸಮಾರಂಭ

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಜಾಗೃತಿಯನ್ನು ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಈ ರೀತಿಯ ವಿಧಾನವು ಜವಾಬ್ದಾರಿಯುತ ಮತ್ತು ಆತ್ಮವಿಶ್ವಾಸವುಳ್ಳ ಭವಿಷ್ಯದ ನಾಗರಿಕರನ್ನು ರೂಪಿಸುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದರು. ಅವರು ಬರಕಾ ಅಂತರರಾಷ್ಟ್ರೀಯ ಶಾಲೆ ಮತ್ತು ಕಾಲೇಜಿನ ಪ್ರೆಪ್-ಗ್ರಾಜ್ಯುಯೇಷನ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇದೇ ವೇಳೆ ಪುಟಾಣಿಗಳು ಆಕರ್ಷಕ ಹಾಡುಗಳು, ಸಣ್ಣ ನಾಟಕಗಳು ಹಾಗೂ ಇತರ ಆಕರ್ಷಣೀಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಕಾರ್ಯಕ್ರಮದಲ್ಲಿ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸರ್ ಲಕ್ಕಿ ಸ್ಟಾರ್, ಆರ್ಥೋಪೆಡಿಕ್ ಸರ್ಜನ್ ಡಾ. ಮುಹಮ್ಮದ್ ನೂಮಾನ್ , ಬೋಳಾರ್ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಎಸ್.ಎ. ಖಲೀಲ್, ಎಸ್‌ಕೆಎಸ್‌ಎಂ ಯೂತ್ ವಿಂಗ್ ಅಧ್ಯಕ್ಷ ನೌಫಾಲ್ ಕೊಕ್ಕಡ, ಮೇಕ್ ಎ ಚೇಂಜ್ ಫೌಂಡೇಶನ್ ಅಧ್ಯಕ್ಷ ಸುಹೈಲ್ ಕಂದಕ್, ಮುಸ್ಲಿಂ ಐಕ್ಯತಾ ವೇದಿಕೆ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಬದ್ರಿಯಾ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.
ಪ್ರಾಂಶುಪಾಲ ಶರಫುದ್ದೀನ್ ಬಿ.ಎಸ್. ಸ್ವಾಗತಿಸಿ, ಬರಕಾ ಸಂಸ್ಥೆಯ ವಿಶಿಷ್ಟ ಶೈಕ್ಷಣಿಕ ವಿಧಾನವನ್ನು ಉಲ್ಲೇಖಿಸಿ ನೈತಿಕ, ಸಾಂಸ್ಕೃತಿಕ ಮತ್ತು ವಿದ್ಯುಕ್ತ ಶಿಕ್ಷಣದ ಬೆಸುಗೆ ಬಹಳ ಮುಖ್ಯ ಎಂದು ಹೇಳಿದರು.
ಬರಕಾ ನಿರ್ದೇಶಕ ಅಯಾನ್ ಅಶ್ರಫ್ ಅಧ್ಯಕ್ಷರ ಸಂದೇಶವನ್ನು ಸಾರಿ, ಮೌಲ್ಯಾಧಾರಿತ ಶಿಕ್ಷಣಕ್ಕೆ ಸಂಸ್ಥೆಯ ಬದ್ಧತೆಯನ್ನು ಒತ್ತಿ ಹೇಳಿದರು.
ಇಸ್ಲಾಮಿಕ್ ಸ್ಟಡೀಸ್‌ನ ಪ್ರಾಂಶುಪಾಲ ಮುಹಮ್ಮದ್ ಹನೀಫ್ ಧನ್ಯವಾದಗೈದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular