ಮಂಡ್ಯ: ಮತದಾನ ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚನ್ನೇಗೌಡನಹಳ್ಳಿಯ ಅಜ್ಜ ಮೃತಪಟ್ಟಿದ್ದಾರೆ. ಕುಂದೂರಯ್ಯ (೮೫) ಸಾವನ್ನಪ್ಪಿರುವ ಅಜ್ಜ. ಅನಾರೋಗ್ಯದಿಂದ ನರಳುತ್ತಿದ್ದ ಕುಂದೂರಯ್ಯ ಅವರು, ಇಂದು ಕುಟುಂಬಸ್ಥರ ಜೊತೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದರು. ಬಳಿಕ ಮನೆಗೆ ಬಂದಿದ್ದ ಮೇಲೆ ಅಜ್ಜ ದಿಢೀರ್ ಸಾವನ್ನಪ್ಪಿದ್ದಾರೆ.
