ಶಿವಮೊಗ್ಗ: ಸತ್ಯ-ಸುಳ್ಳುಗಳ ನಡುವೆ ಈ ಚುನಾವಣೆ ನಡೆಯುತ್ತಿದೆ. ಭಾವನಾತ್ಮಕ ವಿಷಯಗಳ ಮೇಲೆ ಚುನಾವಣೆ ನಡೆಯೊಲ್ಲ, ಗ್ಯಾರಂಟಿ ಯೋಜನೆ ಮೇಲೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಮಂಗಳವಾರ ಸೊರಬ ತಾಲೂಕಿನ ಕುಬಟೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಬಹಳ ಖುಷಿ ಆಗ್ತಿದೆ. ಎಲ್ಲರೂ ಮತದಾನ ಮಾಡಬೇಕು. ಗ್ಯಾರಂಟಿ ಸ್ಕಿಮ್ ಚೆನ್ನಾಗಿ ವರ್ಕೌಟ್ ಆಗಿದೆ. ಆರೂವರೆ ಲಕ್ಷ ಮತದಾರರನ್ನು ಭೇಟಿಯಾಗಿದ್ದೇವೆ. ನಮ್ಮ ಅಭ್ಯರ್ಥಿ ಪರ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹ ಪ್ರಚಾರ ಮಾಡಿದ್ರು. ಈ ಬಾರಿ ಗೀತಾಕ್ಕ ಗೆದ್ದೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈಯಕ್ತಿಕ ಟೀಕೆ, ಆರೋಪ ಪ್ರತಿ ಚುನಾವಣೆಯಲ್ಲಿ ಇದ್ದೇ ಇರುತ್ತದೆ. ಆದರೆ ಅದು ಹತೋಟಿಯಲ್ಲಿದ್ದರೆ ಒಳ್ಳೆಯದು. ಈ ಬಾರಿ ನಮ್ಮ ಪರ ವಾತಾವರಣ ಇದೆ. ಜನರು ಬದಲಾವಣೆ ಬಯಸಿದ್ದಾರೆ. ಹೀಗಾಗಿ ಗೀತಾಕ್ಕೆ ಗೆಲುವು ಗ್ಯಾರಂಟಿ ಎಂದರು ತಿಳಿಸಿದರು.