ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಎಡತೊರೆ ಮಹೇಶ್ ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಂಜನಾಯಕನಹಳ್ಳಿ ಗುರುಸ್ವಾಮಿ ನಾಮಪತ್ರ ಸಲ್ಲಿಸಿದರು.
ಇವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಕೆ ಮಾಡದ ಕಾರಣ ಚುನಾವಣೆ ಅಧಿಕಾರಿ ಬಿ ಆರ್ ಸಿ ಕೃಷ್ಣಯ್ಯನವರು ಗುರುಸ್ವಾಮಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ನಂತರ ಗುರುಸ್ವಾಮಿ ಮಾತನಾಡಿ, ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳ ಸಮಸ್ಯೆ ನನಗೆ ತಿಳಿದಿದೆ ಹಾಗಾಗಿ ಸಮಸ್ಯೆಗಳನ್ನು ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಜೊತೆಗೂಡಿ ಬಗೆಹರಿಸುತ್ತೇನೆ.
ಮತ್ತು ಕುಡಿಯುವ ನೀರು ವಿದ್ಯುತ್ ದೀಪ ಒಳಚರಂಡಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ. ಉಪಾಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಚುನಾವಣೆ ಅಧಿಕಾರಿ ಕೃಷ್ಣಯ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮ್ಮ ಸುರೇಶ್, ನಿಕಟ ಪೂರ್ವ ಉಪಾಧ್ಯಕ್ಷ ಪತ್ರಕರ್ತ ಎಡತೊರೆ ಮಹೇಶ್, ಎಚ್ ಸ್ವಾಮಿ , ಶಿವಮ್ಮ, ಸರಸ್ವತಿ, ಸಣ್ಣರಾಜು, ಸುಮಾ, ಸುಂದರಮಣಿ, ಚಿಕ್ಕಮ್ಮ , ಜಯಲಕ್ಷ್ಮಿ, ಎಸ್ ಮಹೇಶ್ , ಶಿವ ಸ್ವಾಮಿಗೌಡ, ರಾಜೇಶ, ಶಶಿಕುಮಾರ್, ಪಿಡಿಒ ಸಂತೋಷ್ ನಾಗ್
ಕಾರ್ಯದರ್ಶಿ ಮೋಹನ್ ರಾಜ್, ಎಸ್ ಡಿ ಎ ಶಿವರಾಜ್, ಪಂಚಾಯತಿಯ ಸಿಬ್ಬಂದಿಗಳಾದ
ಮಮತಾ, ತಾರಾ, ದಾಸು ಸೂರ್ಯ ಕುಮಾರ್ , ಗಂಗರಾಜ್, ಸೋಮಯ್ಯ, ಮಂಜುನಾಥ್, ನಿಜಲಿಂಗ, ಜವರಯ್ಯ, ಗುರುಲಿಂಗು ಸೇರಿದಂತೆ ಮುಖಂಡರು ಭಾಗವಹಿಸಿದ್ದರು.



