ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆಯ ನೂತನ ಅಧ್ಯಕ್ಷರಾಗಿ ಹೆಚ್.ಬಿ.ಜಯಣ್ಣ ಮತ್ತು ಉಪಾಧ್ಯಕ್ಷರಾಗಿ ಟೈಲರ್ ಚಂದ್ರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಬಿ.ಜಯಣ್ಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಟೈಲರ್ ಚಂದ್ರು ಅವರನ್ನ ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಹಾಲಿ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ವಿಕ್ರಮ್ ಗೌಡ ಅವರು ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕಾಗಿ ಈ ಚುನಾವಣೆ ನಡೆಯಿತು.
ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಹಳಿಯೂರು ಮಧುಚಂದ್ರ, ಎಚ್.ಆರ್. ಕೃಷ್ಣಮೂರ್ತಿ, ಎಚ್.ಕೆ.ವಿಕ್ರಮ್ ಗೌಡ, ಎಚ್.ಎಸ್.ಅಜಯ್,ಗಾರೆಕೃಷ್ಣ, ಎಚ್.ಟಿ.ಪ್ರಮೋದ್, ಸುಭದ್ರಮ್ಮ, ಲಕ್ಷ್ಮಿ, ಹೇಮಾ, ಮಾರ್ಗ ವಿಸ್ತರಣಾಧಿಕಾರಿ ಸಿ.ಜಿ.ಅಭಿಷೇಕ್, ಸಂಘದ ಕಾರ್ಯದರ್ಶಿ ಎಚ್.ಪಿ.ರಾಜೇಶ್ ಇದ್ದರು.
ನಂತರ ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನ ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎ.ಕುಚೇಲ್, ಹೊಸೂರು ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಟಿ.ಕೀರ್ತಿ, ಎಚ್.ಅರ್.ಮಹೇಶ್, ಎಚ್.ಎಸ್.ಜಗದೀಶ್ ಹಳಿಯೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್, ಕಾಂಗ್ರೇಸ್ ಮುಖಂಡ ಡೈರಿ ಮಾದು ವಕೀಲ ಉದಯ್, ಗ್ಯಾರಂಟಿ ಅನುಷ್ಠಾನ ನಿರ್ದೇಶಕ ಮಹಾಲಿಂಗಣ್ಣ, ಮುಖಂಡರಾಣ ವಿಜಿಯಣ್ಣ, ದಿನೇಶ್, ಬಾಲಣ್ಣ, ಸಣ್ಣತಮ್ಮಣ್ಣ, ಸತೀಶ್, ಮೂಗ ರಾಘವೇಂದ್ರ, ಸ್ವೀಟ್ ಭದ್ರ, ಲಯನ್ ರಾಜ್, ಮುರುಳಿ, ಅಬ್ಬು ಸೇರಿದಂತೆ ಮತ್ತಿತರರು ಹಾಜರಿದ್ದರು.



