ವರದಿ ಎಡತೊರೆ ಮಹೇಶ್
ಎಚ್ ಡಿ ಕೋಟೆ : ಮುಖ್ಯಮಂತ್ರಿ ಸಿದ್ದರಾ ಟಿವಿಮಯ್ಯ ಅವರ 78ನೇ ಹುಟ್ಟುಹಬ್ಬವನ್ನು ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷಾ ಹಾಗೂ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪಕೋಟೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ಸಿಹಿ ನೀಡಿ ಚಿತ್ತಧಾಮದಲ್ಲಿ ಮಾನಸಿಕ ಅಸ್ತವ್ಯಸ್ತರ ಜೊತೆ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು,
ನಂತರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನ ನಿಜಕ್ಕೂ ರಾಜ್ಯಕ್ಕೆ ಇಂದು ಒಳ್ಳೆಯ ದಿನ ಕರ್ನಾಟಕದ ಇತಿಹಾಸದಲ್ಲಿ ದೇವರಾಜು ಅರಸು ಅವರು ನೀಡಿದ ಯೋಜನೆಗಳನ್ನು ರೂಪಿಸಿ ಈಗ ಗ್ಯಾರೆಂಟಿ ಅನುಷ್ಠಾನ ಸಮಿತಿಯನ್ನು ಮಾಡಿ ಅನೇಕ ಬಡವರಿಗೆ ಸಹಾಯ ಮಾಡುತ್ತಿದ್ದಾರೆ ನೊಂದ ಸಮುದಾಯಗಳಿಗೆ ಧ್ವನಿಯಾಗಿ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದಾರೆ ಅವರಿಗೆ ಮತ್ತಷ್ಟು ಆಯಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು,
ಕುರುಬ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪ ಕೋಟಿ ಮಾತನಾಡಿ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಿದ್ದರಾಮಯ್ಯ ಸಾಹೇಬರಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ರಾಜ್ಯದಲ್ಲಿ ಶೋಷಿತರ ಪರವಾಗಿ ಬಡವರ ಪರವಾಗಿ ರೈತರ ಪರವಾಗಿ ಶ್ರಮಿಸುತ್ತಿರುವ ರಾಜ್ಯ ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೇವರು ಮತ್ತಷ್ಟು ಶಕ್ತಿ ನೀಡಲಿ ಐದು ವರ್ಷ ಮುಖ್ಯಮಂತ್ರಿ ಆಗಿ ಪೂರೈಸಲಿ ಎಂದರು,

ಕುರುಬ ಸಂಘದ ತಾಲೂಕು ಅಧ್ಯಕ್ಷ ಕೆ ಎಸ್ ಮಾಲೆಗೌಡ ಮಾತನಾಡಿ ಬಡ ಕುಟುಂಬದಿಂದ ಬಂದು ಎರಡು ಬಾರಿ ಮುಖ್ಯಮಂತ್ರಿಯಾಗಿ ಬಡವರ ದೀನದಲಿತರ ಹೆಳಿಗೆಗೆ ಶ್ರಮಿಸುತ್ತಿರುವ ಸಿದ್ದರಾಮಯ್ಯ ಸಾಹೇಬರಿಗೆ ಹುಟ್ಟುಹಬ್ಬವನ್ನು ರಾಜ್ಯದಲ್ಲೇಡೆ ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದಾರೆ ನಮ್ಮ ತಾಲೂಕಿನಲ್ಲೂ ಕೂಡ ಆಚರಣೆ ಮಾಡುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ ಇನ್ನು ಹೆಚ್ಚುಕಲಾ ರಾಜಕೀಯದಲ್ಲಿ ಸೇವೆ ಸಲ್ಲಿಸಲಿ ಎಂದು ಈ ದಿನ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು,

ಮೈಸೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶಿವಪ್ಪಕೋಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷಾ, ಮನುಗನಹಳ್ಳಿ ಮಾದಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್, ಸಿ, ಮಂಜುನಾಥ್, ಬಿ ವಿ ಬಸವರಾಜು, ಪುರದಕಟ್ಟೆ ಬಸವರಾಜು, ಬಿ ಸಿ ಬಸಪ್ಪ, ಮೈಮುಲ್ ಈರೇಗೌಡ, ಎನ್ ಬಾಲಯ್ಯ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ ಎಸ್ ಮಾಲೆಗೌಡ, ಶಿರಮಹಳ್ಳಿ ಚಿಕ್ಕಣ್ಣ, ಮಂಜುನಾಥ್, ನಾಗನಹಳ್ಳಿ ಪ್ರದೀಪ್, ಗಣೇಶ್ ಚಾರ್, ಶಿವರಾಜು, ರಾಜು ವಿಶ್ವಕರ್ಮ, ಕೊಡಸೀಗೆ ಕುಮಾರ್, ವಡ್ಡರಗುಡಿ ಕಾರ್ತಿಕ್, ಕುಮಾರಸ್ವಾಮಿ ವಡ್ಡರಗುಡಿ ರಮೇಶ್, ಆರ್ ಉಪಕಾರಿ, ಆರ್ ಎಂ ವೀರೇಗೌಡ, ಪರಶಿವಮೂರ್ತಿ, ಸ್ಟುಡಿಯೋ ಪ್ರಕಾಶ್, ಬಿಲ್ಲಯ್ಯ, ಶಿಂಡೆನಹಳ್ಳಿ ಗಿರೀಶ್, ಮಂಜುನಾಥ್, ಸೋಮಶೇಖರ್, ಕೊಡಸಿಗೆ ರಾಜೇಗೌಡ, ಕೊಮಾರೇಗೌಡ, ಮೊತ್ತ ಕರಿಯಪ್ಪ ಗೌಡ, ಮಹದೇವ, ಆರ್ ಪಿ ಜಗನ್ನಾಥ್, ಶಿವರಾಜು, ನಾಗರಾಜು, ಮುದ್ದರಾಮೇಗೌಡ, ಪುಟ್ಟೇಗೌಡ, ಮೊತ್ತ ತಮ್ಮಣ್ಣ, ವನಸಿರಿ ಉಮೇಶ್, ಸೂರ್ಯ ಕುಮಾರ್, ವಜ್ರೇಗೌಡ, ಕಬಿನಿ ಮಲ್ಲೇಶ್, ಪಾರ್ಥ ಸಾರಥಿ, ಆಟೋಕುಮಾರ್, ಸೋಮಣ್ಣ, ಮಹದೇವ, ಜಗದೀಶ್,ಮುಂತಾದವರು ಇದ್ದರು,