ಹೆಚ್. ಡಿ. ಕೋಟೆ: ಮೇಟಿಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಹೆಚ್.ಡಿ.ಕೋಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಮಾತನಾಡಿ ಮೇಟಿಕುಪ್ಪೆ ಗ್ರಾಮ ಕಾಡಂಚಿನ ಗ್ರಾಮವಾಗಿದ್ದು ಇಲ್ಲಿ ಗಿರಿಜರು ಹಿಂದುಳಿದ ವರ್ಗಕರು ಕೃಷಿ ಕಾರ್ಮಿಕರು ಹೆಚ್ಚಿನದಾಗಿ ವಾಸಿಸುತ್ತಿದ್ದು ಇವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಕಣ್ಣಿನ ತಪಾಸಣೆ ಶ್ವಾಸಕೋಶ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದು ಪ್ರತಿಯೊಬ್ಬರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು, ಮೈಸೂರಿನಿಂದ ನುರಿತ ವೈದ್ಯರ ತಂಡ ಶಿಬಿರದಲ್ಲಿದ್ದು ಪ್ರತಿಯೊಬ್ಬರೂ ತಮ್ಮ ಆರೋಗ್ಯ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಸಲಹೆಗಳನ್ನು ಪಡೆದುಕೊಳ್ಳಬೇಕು ಮತ್ತು ಚಿಕಿತ್ಸೆಗಳನ್ನು ಪಡೆದುಕೊಂಡು ಹೋಗಬೇಕು ಎಂದು ತಿಳಿಸಿದರು.

ಈ ಶಿಬಿರದಲ್ಲಿ 70 ಮಂದಿ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಗೆ ಒಳಪಟ್ಟರು, 40 ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು, ಕಣ್ಣಿನ ಸಮಸ್ಯೆ ಇರುವವರನ್ನ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಬಂದು ತೋರಿಸಿಕೊಳ್ಳಲು ಸಲಹೆ ನೀಡಲಾಯಿತು, 70 ಜನರನ್ನು ಸಾಮಾನ್ಯ ರೋಗ ತಜ್ಞರು ತಪಾಸಣೆ ಮಾಡಿದರು, ಇದರಲ್ಲಿ ಚರ್ಮದ ಸಮಸ್ಯೆ ಹೃದಯ ಸಂಬಂಧಿ ಸಮಸ್ಯೆ, ಮೂಳೆ ಸಮಸ್ಯೆ ಇರುವವರನ್ನ ಆಸ್ಪತ್ರೆಗೆ ಬರಲು ತಿಳಿಸಲಾಯಿತು, 5 ರೋಗಿಗಳಿಗೆ ಇ. ಸಿ.ಜಿ ಪರೀಕ್ಷೆ ಮಾಡಲಾಯಿತು.

ಶಿಬಿರದಲ್ಲಿ ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ, ಸೇವಾ ಭಾರತಿ ಸಂಸ್ಥೆಯ ಅಚ್ಚುತ್ ರಾವ್, ಶಿವಕುಮಾರ್, ವಕೀಲರಾದ ಸರಸ್ವತಿ, ಮೈಸೂರಿನ ಅವಂಟ್ ಬಿಕೆಜಿ ಆಸ್ಪತ್ರೆಯ ಸಾಮಾನ್ಯ ರೋಗ ತಜ್ಞರಾದ ಲ್ಯಾನ್ಸಿ, ಸೈಯದ್ ಇಸ್ಮಾಯಿಲ್, ಪ್ರಶಾಂತ್, ಶಮಂತ್ ಮತ್ತು ತಂಡದವರು, ಎ.ಎಸ್.ಜಿ ಕಣ್ಣಿನ ಆಸ್ಪತ್ರೆಯ ಮಹೇಶ್, ರಘು, ಮೈಸೂರು ಸಿಪ್ಲ ಬ್ರಿತ್ ಫ್ರೀ ನಾ ಮಹಮ್ಮದ್ ಸಬೀರ್, ಸಾರ್ವಜನಿಕರು ಇದ್ದರು.