ವರದಿ: ಎಡತೊರೆ ಮಹೇಶ್
ಹೆಚ್. ಡಿ. ಕೋಟೆ: ಪ್ರತಿಭೆ ಸಂಸ್ಥೆಯ ವತಿಯಿಂದ ಹ್ಯಾಂಡಪೋಸ್ಟ್ ಹತ್ತಿರದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವಕಾಲತ್ತು ಕಾರ್ಯಕ್ರಮ ನಡೆಯಿತು.
ಬಗರ್ ಹುಕುಂ ಸಾಗೊಳಿಗಾಗಿ 50, 53, 57, ನಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಗೋಳಿ ಚೀಟಿ ನೀಡುವಲ್ಲಿ ಇರುವ ಗೊಂದಲಗಳ ಪರಿಹಾರಕ್ಕಾಗಿ ಇಂದು ಎರಡು ತಾಲೂಕಿನ ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಾಗುವಳಿ ರೈತರ ಒಟ್ಟಿಗೆ ಸಭೆ ಜರುಗಿತು.
ಈ ಸಭೆಯಲ್ಲಿ ಮಾತನಾಡಿದ ಹೆಚ್.ಡಿ. ಕೋಟೆ ತಹಶೀಲ್ದಾರ್ ಶ್ರೀನಿವಾಸ್ ಹೆಚ್. ಡಿ. ಕೋಟೆ ತಾಲೂಕಿನಲ್ಲಿ ಬಡವರು, ಕೂಲಿ ಕಾರ್ಮಿಕರು ಹೆಚ್ಚಿನದಾಗಿ ಇದ್ದು ನೀವು ಈಗಾಗಲೇ 50,53,57 ನಲ್ಲಿ ಅರ್ಜಿ ಹಾಕಿಕೊಂಡು ಉಳುಮೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ಸಾಗೋಳಿ ಚೀಟಿ ಕಾನೂನಾತ್ಮಕವಾಗಿ ನೀಡುತ್ತೇವೆ.
ನಮ್ಮಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ನಡುವೆ ಗೊಂದಲ ಗಳಿದ್ದು, ಜಂಟಿ ಸಮೀಕ್ಷೆ ನಡಿಸಿ ಎನ್. ಓ. ಸಿ. ಪಡೆದು ಸಾಗೋಳಿ ಚೀಟಿ ನೀಡುತ್ತೇವೆ, ನೀವೆಲ್ಲರೂ ಕಚೇರಿಗೆ ಅಲೆದಾಡುವುದು ಬೇಡ, ನಮ್ಮ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸಾಗೋಳಿ ನೀಡುತ್ತೇವೆ ಯಾರು ಸಹ ಹತಾಸೆಗೆ ಒಳ ಗಾಗಬಾರದು ಎಂದು ತಿಳಿಸಿದರು.
ನಂತರ ಮಾತನಾಡಿದ ಸರಗೂರು ತಹಸೀಲ್ದಾರ್ ಮೋಹನ್ ಕುಮಾರಿ ಮಾತನಾಡಿ ನಾನು ಈ ತಾಲೂಕಿಗೆ 7 ತಿಂಗಳಾಯಿತು ಈ ಸಂದರ್ಭದಲ್ಲಿ ಸಾಗೊಳಿಗಾಗಿ 300 ರಿಂದ 500 ಅರ್ಜಿಗಳು ಬಂದಿದ್ದು, ಅರಣ್ಯ ಇಲಾಖೆ, ಕಂದಾಯ, ಸರ್ವೇ ಇಲಾಖೆಯ ಜೊತೆಗೂಡಿ 160 ಜನರಿಗೆ ಸಾಗೋಳಿ ಚೀಟಿ ನೀಡಿದ್ದೇವೆ ಎಂದು ತಿಳಿಸಿದರು. ಮುಂದೆ ನಮ್ಮ ಹಂತದಲ್ಲಿ ಆಗದೆ ಇರುವ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಮಾಡುವ ಭರವಸೆ ನೀಡಿದರು.
ಈ ಸಭೆಯಲ್ಲಿ ಬೆಟ್ಟದಬೀಡು, ಕರಿಗಳ, ಸೋನಳ್ಳಿ, ನಂಜಯ್ಯ ಕಾಲೋನಿ, ಲಂಕೆ, ಹಾದನೂರು, ಲಕ್ಷ್ಮಣ ಪುರ, ಗ್ರಾಮಗಳ ರೈತರು ತಮ್ಮ ಅಹವಾಲುಗಳನ್ನು ಹಂಚಿಕೊಂಡರು.

ಮುಂದಿನ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ ಸಾಗೋಳಿ ಚೀಟಿ ನೀಡಿ ಖಾತೆಯನ್ನು ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು. ನಂತರ ಪ್ರತಿಭೆ ಸಂಸ್ಥೆಯ ನಿರ್ದೇಶಕರಾದ ಪ್ರಸನ್ನ ಮೂರ್ತಿ ಹಾಗೂ ಸಂಸ್ಥೆಯ ಸಿಬ್ಬಂದಿಗಳಿಗೆ ರೈತರು ಅಭಿನಂದನೆ ಸಲ್ಲಿಸಿದರು
ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಅಧ್ಯಕ್ಷ ಮಹಾದೇವ ನಾಯಕ, ಗೌರವ ಅಧ್ಯಕ್ಷ ಬಿಕೆ ಮಹೇಶ್ ಎಡತೋರೆ, ಪ್ರತಿಭಾ ಸಂಸ್ಥೆ ಗೋಪಾಲರಾಜು, ಬಸವರಾಜು, ಶಿವರಾಜು, ಮಹದೇವಪ್ಪ, ,ಲೀಲಾವತಿ, BT ಉಮೇಶ್, ಶೈಲಾ ಸುಧಾಮಣಿ, ರಾಜಣ್ಣ, ಸುಶೀಲ ಮಾರ್ಸಿಲಿನ್ , ನಂದೀಶ, ಶಿವಲಿಂಗೇಗೌಡ, ಗೋಪಾಲ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಂಘಟನೆಯ ಅಧ್ಯಕ್ಷರು ,ಉಪಾಧ್ಯಕ್ಷರು, ಕಾರ್ಯದರ್ಶಿ , ಖಜಾಂಚಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಕೋಟೆ ಸರಗೂರು ತಾಲೂಕಿನ ರೈತರ ಭಾಗವಹಿಸಿದರು.