ವರದಿ: ಎಡತೊರೆ ಮಹೇಶ್
ಎಚ್.ಡಿ. ಕೋಟೆ: ಎಚ್.ಡಿ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಡಿಕೇರಿ ಗ್ರಾಮದ ಗೇಟ್ ಪೆಟ್ರೋಲ್ ಬಂಕ್ ಹತ್ತಿರ, ಮೈಸೂರು-ಮನಂದವಾಡಿ ರಸ್ತೆಯಲ್ಲಿ 06-07-2025 ರಂದು ರಾತ್ರಿ ಸುಮಾರು 8.30ಕ್ಕೆ, ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾರ್ವಜನಿಕರ ಸಹಾಯದಿಂದ ಮೃತ ದೇಹವನ್ನು ಮೈಸೂರು ಸರ್ಕಾರಿ ಮೆಡಿಕಲ್ ಕಾಲೇಜು ಶವಗೃಹಕ್ಕೆ ಸಾಗಿಸಲಾಗಿದೆ.
ಮೃತ ವ್ಯಕ್ತಿ: 5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕೋಲು ಮುಖ, ಬಿಳಿ ಮಿಶ್ರಿತ ಕಪ್ಪು ಕೂದಲು, ಗಡ್ಡೆ-ಮೀಸೆ ಇದ್ದು, ಹಳದಿ ಶರ್ಟು ಹಾಗೂ ಕಂದು ಪ್ಯಾಂಟ್ ಧರಿಸಿರುತ್ತಾರೆ.
ಈ ಅಪರಿಚಿತ ವ್ಯಕ್ತಿಯ ವಾರಸುದಾರರು ಇದುವರೆಗೂ ಪತ್ತೆ ಆಗಿರುವುದಿಲ್ಲ ಮೃತನಿಗೆ ಹೋಲಿಕೆಯುಳ್ಳ ಯಾವುದಾದರು ವ್ಯಕ್ತಿ ಕಾಣೆಯಾದ ಪ್ರಕರಣಗಳು ನಿಮ್ಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೆ ಎಚ್ ಡಿ ಕೋಟೆ ಪೊಲೀಸ್ ಠಾಣೆಗೆ ದೂರವಾಣಿ ಸಂಖ್ಯೆ 08228 255329 ಅಥವಾ ಮೊಬೈಲ್ ನಂಬರ್ 9480805063 ಗೆ ಮಾಹಿತಿ ನೀಡುವಂತೆ ಸರ್ಕಲ್ ಇನ್ಸ್ಪೆಕ್ಟರ್, ಗಂಗಾಧರ್ ಪತ್ರಿಕ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.