ವರದಿ : ಎಡತೊರೆ ಮಹೇಶ್
ಹೆಚ್.ಡಿ. ಕೋಟೆ: ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ವಿಶ್ವ ಭಾರತಿ ಕಾಲೇಜಿನ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್.ಟಿ ಮತ್ತು ಕಾಲೇಜಿನ ಸಂಯೋಜಕರಾದ ಶಿವರಾಜು, ಕಾಲೇಜಿನ ಪ್ರಾಂಶುಪಾಲರಾದ ಕಂದಸ್ವಾಮಿ ಉದ್ಘಾಟಿಸಿದರು.
ಈ ಕಾರ್ಯ ಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ BHEO ಉದಯ್ ಕುಮಾರ್ ರವರು ಮಾತನಾಡಿ, ಈ ವರ್ಷದ ಘೋಷ ವಾಕ್ಯ, ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಎಂದರು.

ಕಾಲೇಜ್ ಮತ್ತು ಶಾಲೆಗಳ ಮಕ್ಕಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.ಮತ್ತು ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ .ರವಿಕುಮಾರ್ ಮಾತನಾಡಿ, 31 ಮೇ 20 23ರಂದು WHO ಪ್ರಪಂಚಾದ್ಯಂತ ಸಾರ್ವಜನಿಕ ಆರೋಗ್ಯ ಚಾಂಪಿಯನ್ ಗಳು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲು ಒಟ್ಟಾಗಿ ಸೇರುತ್ತಾರೆ. ಈ ವರ್ಷದ ಥೀಮ್ “ನಮಗೆ ಆಹಾರ ಬೇಕು ತಂಬಾಕು ಅಲ್ಲ “2023ರ ಜಾಗತಿಕ ಅಭಿಯಾನವು ತಂಬಾಕು ರೈತರಿಗೆ ಪರ್ಯಾಯ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆ ಅವಕಾಶಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಮರ್ಥನೀಯ ಪೌಷ್ಟಿಕ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಹಾಗೂ ಇದು ತಂಬಾಕು ಉದ್ಯಮದ ಪ್ರಯತ್ನಗಳನ್ನು ಸುಸ್ಥಿರ ಬೆಳವಣಿಗೆಗಳೊಂದಿಗೆ ಬೆಳೆಯುವ ಪ್ರಯತ್ನಗಳೊಂದಿಗೆ ಹಸ್ತಕ್ಷೇಪ ಮಾಡುವ ಗುರಿಯನ್ನು ಹೊಂದಿದೆ ,ಇದರಿಂದ ಜಾಗತಿಕ ಆಹಾರ ಬಿಕ್ಕಟ್ಟಿಗೆ ಕೊಡುಗೆ ನೀಡುತ್ತದೆ. ಇಂದಿನ ಯುವ ಜನಾಂಗದಲ್ಲಿ ಮೋಜಿಗಾಗಿ ಶುರು ಮಾಡುವ ಬೇಡಿ ಸಿಗರೇಟ್ ಸೇವನೆ ಮುಂದಿನ ದಿನಗಳಲ್ಲಿ ಅವು ನಮ್ಮ ದೇಹವನ್ನೇ ತಿನ್ನುತ್ತವೆ, ಎನ್ನುವ ಅರಿವು ಕೂಡ ಇರುವುದಿಲ್ಲ ಧೂಮಪಾನದಿಂದ ಸ್ವಲ್ಪಮಟ್ಟಿಗೆ ಒತ್ತಡ ಕಡಿಮೆ ಆಗುತ್ತದೆ ಎನ್ನುವುದು ಸುಳ್ಳು ಇನ್ನೂ ಬೀಡಿ ಅಥವಾ ಸಿಗರೇಟ್ ಸೇದುವುದರಿಂದ ರಕ್ತದಲ್ಲಿ ಪರಿಚಲನೆ ಉಂಟಾಗಿ ಇನ್ನೂ ಒತ್ತಡ ಹೆಚ್ಚಾಗುತ್ತಿದೆ. ಆರೋಗ್ಯ ಇದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಹಾಗಾಗಿ ತಂಬಾಕು ಸೇವನೆಯಿಂದ ದೂರ ಇದ್ದರೆ ಉತ್ತಮ ಎಂದರು.
ತಂಬಾಕಿನಿಂದ ಬರುವ ಶ್ವಾಸಕೋಶ ಕ್ಯಾನ್ಸರ್ ಗಂಟಲು ಕ್ಯಾನ್ಸರ್ ವಸಡು ಕ್ಯಾನ್ಸರ್ ಸೇರಿದಂತೆ ಇನ್ನಿತರ ಮಾರಕ ರೋಗಗಳ ಬಗ್ಗೆ ಅರಿವು ಮೂಡಿಸಿದರು.
ಜೊತೆಗೆ ಬಿಡಿ ಸಿಗರೇಟ್ ಗುಟ್ಗಾ ಪಾನ್ ಪರಾಗ್ ಸೇರಿದಂತೆ ಇನ್ನಿತರ ತಂಬಾಕಿನಿಂದ ತಯಾರಾಗುವ ವಸ್ತುಗಳನ್ನು ಸೇವಿಸದೆ ದೂರ ಉಳಿಯುವಂತೆ ಮನವಿ ಮಾಡಿಕೊಂಡರು.
ತಂಬಾಕು ಮೃತ್ಯು ಸ್ವರೂಪ:
ತಂಬಾಕು ತ್ಯಜಿಸುವುದರಿಂದ ತಂಬಾಕು ದುಶ್ಚಟದಿಂದ ಸಾವನ್ನು ಸುಲಭವಾಗಿ ತಡೆಗಟ್ಟಬಹುದು. ತಂಬಾಕು ಸೇವನೆಯಿಂದ 2500 ಭಾರತೀಯರು ಪ್ರತಿ ದಿನ ಸಾಯುತ್ತಿದ್ದಾರೆ. ವಿಶ್ವದ 10ರಲ್ಲಿ 1 ಸಾವು ತಂಬಾಕನಿಂದ ಉಂಟಾಗುತ್ತದೆ. *ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಶ್ವಾಸಕೋಶದ ಕಾಯಿಲೆ, ಲಕ್ವಾ ಮತ್ತು ಇತರೆ ಕಾಯಿಲೆಗಳು ತಂಬಾಕು ಸೇವನೆಯಿಂದ ಬರಬಹುದಾಗಿದೆ. 3000 ರಿಂದ 4000 ಅಪಾಯಕಾರಿ ರಾಸಾಯನಿಕಗಳನ್ನು ತಂಬಾಕು ಪದಾರ್ಥಗಳು ಹೊಂದಿರುತ್ತದೆ. ಪ್ರತಿ ಸಿಗರೇಟು /ಬಿಡಿ ಸೇವನೆ 7 ನಿಮಿಷ ಆಯಸ್ಸು ಮೊಟಕು ಗೊಳಿಸುತ್ತದೆ ಎಂದು ತಿಳಿಸಿದರು.
2003 ಕೋಟ್ಬಾ ಅಡಿಯಲ್ಲಿ ತಂಬಾಕು ಮಾರಾಟ ಮಾಡಿದವರಿಗೆ 200 ದಂಡ ವಿಧಿಸಲಾಗುತ್ತದೆ ಎಂದ ತಿಳಿಸಿದರು.
ಈ ಕಾರ್ಯ ಕ್ರಮದಲ್ಲಿ ,ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಸ್. ಡಿ. ಕುಮಾರಸ್ವಾಮಿ, BHEO ಉದಯ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗೇಂದ್ರ,ರವಿರಾಜ್,ಅಶೋಕ್,ಅರಳಪ್ಪ,ಸಮುದಾಯ ಆರೋಗ್ಯ ಅಧಿಕಾರಿಗಳು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು,ಇನ್ನಿತರರು ಹಾಜರಿದ್ದರು.