Wednesday, December 17, 2025
Google search engine

Homeಸ್ಥಳೀಯಹೆಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಜನಪರ ಹಾಗೂ ರೈತರ ಪರವಾಗಿ ಆಡಳಿತ ನೀಡಿರುವುದು ದೇಶಕ್ಕೆ ಮಾದರಿ

ಹೆಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಜನಪರ ಹಾಗೂ ರೈತರ ಪರವಾಗಿ ಆಡಳಿತ ನೀಡಿರುವುದು ದೇಶಕ್ಕೆ ಮಾದರಿ

ವರದಿ: ವಿನಯ್ ದೊಡ್ಡಕೊಪ್ಪಲು


ಕೆ.ಆರ್.ನಗರ : ಕೇಂದ್ರದ ಬೃಹತ್ ಕೈಗಾರಿಕಾ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಜನಪರ ಹಾಗೂ ರೈತರ ಪರವಾಗಿ ಆಡಳಿತ ನೀಡಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಂಸತ್ ತಿಳಿಸಿದರು.

ಪಟ್ಟಣದ ಬಸವೇಶ್ವರ ಬ್ಲಾಕ್ ನಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಕೇಂದ್ರದ ಬೃಹತ್ ಕೈಗಾರಿಕಾ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 66 ನೇ ವರ್ಷದ ಹುಟ್ಟು ಹಬ್ಬದ ಸಂಬ್ರಮಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು.

2006 ಮತ್ತು 2018 ರಲ್ಲಿ ಹೆಚ್‌ಡಿ.ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಉತ್ತಮ ಆಡಳಿ ನೀಡಿದ್ದಾರೆ. ಲಾಟರಿ ಮತ್ತು ಸಾರಾಯಿ ನಿಷೇದ ಮಾಡುವ ಮೂಲಕ ಬಡವರ, ನೊಂದವರ ದ್ವನಿಯಾಗಿ ನಿಂತಿದ್ದಾರೆ, 2018 – 19 ಸಾಲಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ವಿಪರೀತ ಮಳೆಯಿಂದಾಗಿ ಭೂ ಕುಸಿತ ಉಂಟಾದ ಪರಿಣಾಮ ಸಾವಿರಾರು ಮನೆಗಳು ನೆಲಸಮವಾಗಿ ಜನರು ತಮ್ಮ ಪ್ರಾಣವನ್ನೇ ಕಳೆದು ಕೊಂಡರು ಅಂತಹ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್ ಅವರ ಮೂಲಕ ಕೇವಲ ಹತ್ತು ತಿಂಗಳಲ್ಲಿ 850 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ ಕೀರ್ತಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 2018- 19 ನೇ ಸಾಲಿನಲ್ಲಿ ‌ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ದೇಶದ ಬೆನ್ನೆಲುಬು ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಅದರಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ರೂ150 ಕೋಟಿಗೂ ಹೆಚ್ಚು ರೈತರುಗಳ ಸಾಲ ಮನ್ನಾ ಆಗಿದೆ ಎಂದು ಹೇಳಿದರು.

ಬಳಿಕ ಕೇಂದ್ರದ ದಿಶಾ ಕಮಿಟಿ ಸದಸ್ಯ ಹಾಗೂ ತಾಲೂಕು ಜಾದಳ ಅಧ್ಯಕ್ಷ ಹಂಪಾಪುರ ಕುಮಾರ್ ಮಾತನಾಡಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಏನಾದರೂ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದು ಹೆಚ್ಚಿನದಾಗಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು ಕ್ಷೇತ್ರದಲ್ಲಿ 900 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗೆ ಅನುದಾನ‌ ಒದಗಿಸಿದ್ದಾರೆ ಎಂದರು.

ಮುಂದಿನ 2028 ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ,ಬಿಜೆಪಿ ಮೈತ್ರಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು ನಮ್ಮ ನೆಚ್ಚಿನ ನಾಯಕರಾದ ಕುಮಾರಣ್ಣನವರು ಮುಖ್ಯಮಂತ್ರಿ ಆಗಲಿದ್ದಾರೆ ಅದೇ ಮಾಜಿ ಸಚಿವರಾದ ಸಾ.ರಾ.ಮಹೇಶ್ ಸಚಿವರಾಗಲಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಪಟ್ಟಣದ ಬಸವೇಶ್ವರ ಬ್ಲಾಕ್ ನಲ್ಲಿರುವ ಮಲೇ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನೆಚ್ಚಿನ ನಾಯಕ ಕೇಂದ್ರದ ಸಚಿವರಾದ ಹೆಚ್.ಡಿ.ಕೆ. ಅಭಿಮಾನಿಗಳು, ಜಾದಳ ಕಾರ್ಯಕರ್ತರು, ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ, ಬಾಬು ಜಗಜೀವನ್ ರಾಂ ಪುತ್ಥಳಿಗೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮಾಲಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಚಂದ್ರಶೇಖ‌ರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ, ತಾಲೂಕು ಜಾದಳ ವಕ್ತಾರ ಕೆ.ಎಲ್.ರಮೇಶ್, ಯುವ ಜೆಡಿಎಸ್ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ತಾಲೂಕು ಜಾದಳ ಯುವ ಘಟಕದ ಅಧ್ಯಕ್ಷ ಅಧ್ಯಕ್ಷ ಡಿ.ವಿ. ಗುಡಿ ಯೋಗೇಶ್,, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ತಾಲೂಕು ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ತಾ.ಜಾದಳ ಕಾನೂನು ಸಲಹೆಗಾರ ವಕೀಲ ಅಂಕನಹಳ್ಳಿ ತಿಮ್ಮಪ್ಪ, ತಾಪಂ ಮಾಜಿ ಸದಸ್ಯರಾದ ಹಂಗರಬಾಯನಹಳ್ಳಿ ತಮ್ಮಣ್ಣ, ತಾಲೂಕು ಯುವ ಜೆಡಿಎಸ್ ಎಸ್.ಸಿ.ಘಟಕದ ಅಧ್ಯಕ್ಷ ಹಂಪಾಪುರ ಸೂರಿ, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಮಾಜಿ ಸದಸ್ಯರಾದ ಕೆ.ಉಮೇಶ್, ಸಂತೋಷ್ ಗೌಡ , ಮಂಜುಳ ಚಿಕ್ಕವೀರು, ತೋಂಟದಾರ್ಯ, ರಾಜ.ಶ್ರೀಕಾಂತ್, ಬಾರ್ ಶಿವಕುಮಾ‌ರ್, ಕೆ.ಬಿ.ಸುಬ್ರಹ್ಮಣ್ಯ, ಜೆಡಿಎಸ್ ಮುಖಂಡರಾದ ಶಂಬು, ಧನಪಾಲ್, ಅನೀಪ್ ಗೌಡ,, ವಡ್ಡರವಿ, ಭಾಗ್ಯಲಕ್ಷ್ಮಿ, ರೂಪ, ಬಾಲಾಜಿಗಣೇಶ್, ಸಾತಿಗ್ರಾಮ ಶಂಕರ್, ನಾಗಣ್ಣ, ಮುಭಾರಕ್,, ಚೌಕಳ್ಳಿ ಆನಂದ್, ಹೆಬ್ಬಾಳು ಶಿವಣ್ಣ, ಕಂಚಗಾರ ಕೊಪ್ಪಲು ದೇವೇಂದ್ರ, ಕಂಚಿನಕೆರೆ ದೇವು, ಕೇಬಲ್ ಮಲ್ಲಿ, ಡೈರಿ ಆನಂದ್, ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular