ಮದ್ದೂರು: ಎಚ್.ಕೆ.ವೀರಣ್ಣಗೌಡರವರು ಶಿಕ್ಷಕರಾಗಿ ಪತ್ರಕರ್ತರಾಗಿ, ಶಾಸಕರಾಗಿ, ಸಚಿವರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಶಿಕ್ಷಣ ಪ್ರೇಮಿಯಾಗಿ ವಿವಿಧ ಕ್ಷೇತ್ರದಲ್ಲಿ ತಮ್ಮದೆಯಾದ ಹಲವಾರು ಕೊಡುಗೆಗಳನ್ನು ಸಮಾಜಕ್ಕೆ ನೀಡಿದ ಮಹಾನ್ ವ್ಯಕ್ತಿ ಎಂದು
ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಅಂಗಸಂಸ್ಥೆ ಎಚ್.ಕೆ.ವೀರಣ್ಣಗೌಡ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗುರುವಂದನಾ ಮತ್ತು ಸಂಸ್ಥೆಯ ಕಾರ್ಯದಶರ್ಿ ಸಿ.ಅಪೂರ್ವಚಂದ್ರ ಷಷ್ಠಿಪೂತರ್ಿ ಕಾರ್ಯಕ್ರಮದ ವೇಳೆ ದಿವ್ಯ ಸಾನಿದ್ಯ ನೀಡಿ ಆಶೀರ್ವಚನ ನೀಡಿದರು.

ಎಚ್.ಕೆ.ವೀರಣ್ಣಗೌಡರ ಸಹವತರ್ಿ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಅವರ ಪುತ್ರ ಸಿ.ಅಪೂರ್ವಚಂದ್ರ ಇಬ್ಬರು ಸೇರಿಕೊಂಡು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದ ಲಕ್ಷಾಂತರ ಮಂದಿಗೆ ವಿದ್ಯಾದಾನ ಮಾಡುತ್ತಿರುವುದು ಮೆಚ್ಚುಗೆಯ ವಿಷಯ ಎಂದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಬ್ರಿಟಿಷರ ವಿರುದ್ಧ ಆರಂಭದಲ್ಲೇ ದನಿಯೆತ್ತಿದ ಮದ್ದೂರು ಪಟ್ಟಣದ ಶಿವಪುರ ಐತಿಹಾಸಿಕ ಸ್ಥಳವಾಗಿದ್ದು ಇದಕ್ಕೆ ಅಣಿಗೊಳಿಸಿದ ಅಂದಿನ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ಧಲಿಂಗಯ್ಯ, ಎಚ್.ಕೆ.ವೀರಣ್ಣಗೌಡ ಇನ್ನಿತರ ಸ್ವಾತಂತ್ರ್ಯ ಪ್ರೇಮಿಗಳ ಮನೋಸ್ಥೈರ್ಯ ಮೆಚ್ಚತಕ್ಕದೆಂದರು.
ಅಕ್ಷರ, ಆರೋಗ್ಯ, ಅನ್ನದಾಸೋಹದ ಕ್ರಾಂತಿಗೆ ದಕ್ಷಿಣ ಭಾರತದಲ್ಲೇ ಆದಿಚುಂಚನಗಿರಿ ಮಹಾಸಂಸ್ಥಾನಮಠ, ಸಿದ್ಧಗಂಗಾಮಠ ಮತ್ತು ಸುತ್ತೂರು ಶ್ರೀಕ್ಷೇತ್ರಗಳು ಮುಂಚೂಣಿಯಲ್ಲಿದ್ದು ರಾಜ್ಯ ಸಕರ್ಾರದ ಬಿಸಿಯೂಟ ಕಾರ್ಯಕ್ಕೆ ಶ್ರೀಮಠಗಳೇ ಪ್ರೇರಣೆಯೆಂದು ಬಣ್ಣಿಸಿದರು.
ಇಂದಿನ ಕಾರ್ಯಕ್ರಮ ಗುರು ಮತ್ತು ಜಂಗಮರ ಸಮಾಗಮ ಕಾರ್ಯಕ್ರಮವಾಗಿದ್ದು ಷಷ್ಠಿಪೂತರ್ಿ ನೆಪದಲ್ಲಿ 20ಕ್ಕೂ ಹೆಚ್ಚು ಗುರುಗಳನ್ನು ಮೂರು ದಾರ್ಶನಿಕರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸುವ ಅನುಕರಣೀಯ ಕಾರ್ಯಕ್ಕೆ ಸಿ.ಅಪೂರ್ವಚಂದ್ರ ಮುನ್ನುಡಿ ಬರೆದಿದ್ದಾರೆಂದು ಶ್ಲಾಘಿಸಿದರು.
ಸಿ.ಇ.ಟಿ ಪ್ರಾಯೋಜಿತ ಪುಸ್ತಕ ಬಿಡುಗಡೆಗೊಳಿಸಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯೂ ಎಚ್.ಕೆ.ವೀರಣ್ಣಗೌಡ ಹಾಗೂ ಕೆ.ಟಿ.ಚಂದು ಅವರೊಡಗೂಡಿ ಚುಂಚನಗಿರಿ ಮಠಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.
ಹಿಂದೆ ಆದರ್ಶ ಶಿಕ್ಷಕರ ಪಡೆಯೇ ಇತ್ತೆಂದ ಅವರು ಸರ್ವಪಲ್ಲಿ ರಾಧಾಕೃಷ್ಣನ್ ರವರು ಕೆಲವು ವಿಶ್ವವಿದ್ಯಾನಿಲಯಗಳ ಸ್ಥಾಪನೆಯೊಟ್ಟಿಗೆ ರಷ್ಯಾ ದೇಶದ ಭಾರತ ರಾಯಭಾರಿಯಾಗಿ ಎರಡು ದೇಶಗಳ ಇಂದಿನ ಉತ್ತಮ ಬಾಂಧವ್ಯಕ್ಕೆ ಅಂದೇ ಮುನ್ನುಡಿ ಬರೆದ್ದರೆಂದು ಪ್ರಶಂಸಿದರು.
ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಗುರಿ ಉತ್ತಮ ವಿದ್ಯಾಥರ್ಿಗಳನ್ನು ರೂಪಿಸುವತ್ತ ಇದ್ದಲ್ಲಿ
ಚನ್ನೇಗೌಡ ವಿದ್ಯಾಸಂಸ್ಥೆಯಂತೆ ಸುಸಂಸ್ಕೃತ ಸಮಾಜ, ರಾಜಕಾರಣಿಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಶೈಕ್ಷಣಿಕ ಮಟ್ಟ ಗುಣವರ್ಧನೆಯ ಗುರಿ ಈಡೇರುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆ ರಾಣಿಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್.ಕೆ.ಕೋಳಿವಾಡ ಮಾತನಾಡಿ ಕೌಸಲ್ಯಗಳಿಲ್ಲದ ಶಿಕ್ಷಣ ನಿರುದ್ಯೋಗಕ್ಕೆ ಹೆಚ್ಚು ಕಾರಣವೆಂದು ಅಗತ್ಯ ಕೌಸಲ್ಯ ಸಿಕ್ಕಲ್ಲಿ ಪ್ರತಿಯೊಬ್ಬರೂ ತಮ್ಮದೇ ಉದ್ಯೋಗಕ್ಕೆ ಹೊಂದಿಕೊಳ್ಳಲು ಸಾಧ್ಯವೆಂದು ತಾವು ಕೈಗೊಂಡಿರುವ ಮೋಡ ಬಿತ್ತನೆ ಕುರಿತಾದ ವಿಮಾನ ಚಾಲಕರ ಮಾಸಿಕ ವೇತನ 6 ಲಕ್ಷವಿದ್ದು ಯಾವುದೇ ಪದವಿ ಪಡೆಯದ ವಿಮಾನ ಚಾಲಕರು ಕೌಸಲ್ಯತೆ ಹೊಂದಿ ಅಧಿಕ ಸಂಬಳ ಪಡೆಯುವ ಉದಾಹರಣೆ ನೀಡಿವೆ.
ವಿಧಾನ ಪರಿಷತ್ ಸದಸ್ಯ, ಸಂಸ್ಥೆಯ ಹಿರಿಯ ವಿದ್ಯಾಥರ್ಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ಗೂಳಿಗೌಡ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಐದು ವರ್ಷದಿಂದೇಚೆಗೆ 72 ಸಾವಿರ ಮಂದಿ ಪಿ.ಯು.ಸಿ ಪರೀಕ್ಷೆ ಬರೆದಿದ್ದು ಈ ಪೈಕಿ 18 ಸಾವಿರ ಮಂದಿ ಫೇಲಾಗುವ ಮೂಲಕ ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಅನುತ್ತೀರ್ಣದ ಬಗ್ಗೆ ಅರಿಯಬೇಕೆಂದರು.
ಜಿಲ್ಲೆಯಲ್ಲಿ 2201 ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿದ್ದು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಠಿಯಿಂದ ಖಾಲಿಯಿರುವ 4500 ಶಿಕ್ಷಕ ಹುದ್ದೆಗಳನ್ನು ಭತರ್ಿ ಮಾಡಲು ಅಗತ್ಯ ಕ್ರಮಕ್ಕೆ ಮುಖ್ಯಮಂತ್ರಿಗಳ ಜತೆ ಚಚರ್ಿಸಿ ಪತ್ರ ಬರೆಯುವ ಕುರಿತು ವಿವರಿಸಿದರು.
ಅಭಿನಂದನೆ: ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹದಿನೆಂಟಕ್ಕೂ ಶಿಕ್ಷಕರನ್ನು ಕಾರ್ಯಕ್ರಮದ ವೇಳೆ ಅಭಿನಂದಿಸಿ ಗೌರವಿಸಿದ ಗಣ್ಯರು ಫಲತಾಂಬೂಲ ನೀಡಿ ಹರಿಸಿದರು. ಷಷ್ಠಿಪೂತರ್ಿ ಅಂಗವಾಗಿ ಸಂಸ್ಥೆಯ ಕಾರ್ಯದಶರ್ಿ ಸಿ.ಅಪೂರ್ವಚಂದ್ರ ಅವರನ್ನು ವೇದಿಕೆಯಲ್ಲಿದ್ದ ಶ್ರೀಗಳು ಆಶೀರ್ವದಿಸಿ ಹರಸಿದರು.
ಶಾಸಕ ದರ್ಶನ್ಪುಟ್ಟಣ್ಣಯ್ಯ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ನಗರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕಉಮಾರ್, ಚನ್ನೇಗೌಡ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ಅಧ್ಯಕ್ಷ ಸ್ವರೂಪ್ಚಂದ್, ಖಜಾಂಚಿ ಶಿವರಾಮು, ನಿದರ್ೇಶಕರಾದ ಎಂ.ಎ.ರಾಮಲಿಂಗಯ್ಯ, ಮುತ್ತರಾಜು, ಕನರ್ಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್ಗೌಡ, ಪ್ರಾಂಶುಪಾಲರುಗಳಾದ ಯು.ಎಸ್.ಶಿವಕುಮಾರ್, ಡಾ.ಎಸ್.ಪಿ.ಕಿರಣ್, ಎಸ್.ಸುರೇಂದ್ರ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಮಹೇಶ್, ವರದರಾಜು, ಕಸಾಪ ತಾಲೂಕು ಅಧ್ಯಕ್ಷ ಸುನೀಕುಮಾರ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ನಿಕಟಪೂರ್ವ ಪ್ರಾಂಶುಪಾಲ ಪ್ರಕಾಶ್ ಇದ್ದರು.