Monday, May 11, 2026
Google search engine

Homeರಾಜ್ಯಸುದ್ದಿಜಾಲಸರಳವಾಗಿ ಜನ್ಮದಿನ ಆಚರಿಸಿ ಮಾದರಿಯಾದ ಹೆಚ್. ವಿಶ್ವನಾಥ್

ಸರಳವಾಗಿ ಜನ್ಮದಿನ ಆಚರಿಸಿ ಮಾದರಿಯಾದ ಹೆಚ್. ವಿಶ್ವನಾಥ್

ಕೆ ಆರ್ ನಗರ:   ತಮ್ಮ ಅಧಿಕಾರದ ಅವಧಿಯಲ್ಲಿ ಜನಪರ ಮತ್ತು ಅಭಿವೃದ್ದಿ ಪರವಾದ ಕೆಲಸ ಮಾಡುವ ಮೂಲಕ  ಮನೆ ಮಾತಾಗಿದ್ದ  ಅಡಗೂರು ಹೆಚ್. ವಿಶ್ವನಾಥ್ ಅವರು ತನ್ನ ಜನ್ಮ ದಿನವನ್ನು ಮಾದರಿಯಾಗಿ ಆಚರಣೆ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾದರು‌.  

 ಸಮಾಜ ಸೇವಕರು ಆದ ಖ್ಯಾತ ಮೂಳೆತಜ್ಞ ಡಾ. ಮೆಹಬೂಬ್ ಖಾನ್  ಅವರನ್ನು ಸನ್ಮಾನಿಸಿ ಸರಳ ಮತ್ತು ಅರ್ಥಪೂರ್ಣವಾಗಿಸಿದರು‌.

  ಹೆಚ್.ವಿಶ್ವನಾಥ್ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಜನ್ಮ ದಿನದ ಶುಭ ಕೋರಿದರು.

    ಜಿ.ಪಂ.   ಮಾಜಿ ಉಪಾಧ್ಯಕ್ಷ ಎ. ಎಸ್. ಚನ್ನಬಸಪ್ಪ,  ಮಾಜಿ  ಸದಸ್ಯರಾದ ಎಂ.ಟಿ.ಕುಮಾರ್, ಅಮಿತ್ ವಿ.ದೇವರಹಟ್ಟಿ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಡಿ ಕಾಂತರಾಜು, ಮಾಜಿ ಸದಸ್ಯ ಎನ್. ಶಿವಕುಮಾರ್. ನಟರಾಜು,  ಮುಖಂಡರಾದ ಎಚ್.ಪಿ. ಶಿವಣ್ಣ,  ಕೃಷ್ಣ ಶೆಟ್ಟಿ,  ಪೆರಿಸ್ವಾಮಿ. ಮಹೇಶ್, ಮಂಜುನಾಥ್, ಜ್ಙಾನಾನಂದ, ಮೋಹನ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular