ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹನಸೋಗೆ ಕೃಷಿಪತ್ತಿನ ಸಹಕಾರ ಸಂಘದ 2023-24ನೇ ಸಾಲಿನಲ್ಲಿ ಷೇರುದಾರ ರೈತರ ಸಹಕಾರ ದಿಂದ 4.85 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಮಜಾದ್ ಪಾಷ ಹೇಳಿದರು.
ಗುರುವಾರ ನಡೆದ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.2024-25ನೇ ಸಾಲಿನಲ್ಲಿ ಕೆ.ಸಿ.ಸಿ ಸಾಲವಾಗಿ 4.47 ಕೋಟಿ, ಮಹಿಳಾ ಸಂಘಗಳಿಗೆ 60 ಕ್ಷ ಸೇರಿದಂತೆ ಇನ್ನಿತರ ಸಾಲವಾಗಿ ಒಟ್ಟು 5.43 ಕೋಟಿ ಸಾಲವನ್ನು ವಿತರಿಸಲಾಗಿದ್ದು ಸಾಲ ವಸೂಲಾತಿ ಶೇ.89.ರಷ್ಟು ಇದೆ ಎಂದು ತಿಳಿಸಿದರು.
2024-25 ಸಾಲಿನಲ್ಲಿ ಸಂಘವು ಕೆ.ಸಿ.ಸಿ, ಬೆಳೆಸಾಲವನ್ನು 12 ಕೋಟಿರೂಗಳಿಗೆ ಹೆಚ್ಚಿಸುವುದು, ಮಧ್ಯಮಾವದಿ ಬೋರ್‌ವೆಲ್ ಸಾಲ ಮತ್ತು ಐ.ಪಿ. ಸೆಟ್ ಸಾಲ ಹಾಗೂ ಟ್ರ್ಯಾಕ್ಟರ್, ಬೈ ಕ್ ಸಾಲವನ್ನು ನೀಡುವುದು, ಎಸ್.ಹೆಚ್.ಜಿ. ಸಂಘಗಳನ್ನು ರಚಿಸಿ ಅವುಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇದರ ಜತಗೆ ಸಂಘದ ಷೇರುದಾರ ರೈತರು ನಿಧನರಾದರೇ ಅವರ ಕುಟುಂಬಕ್ಕೆ 6 ಸಾವಿರ ನೀಡುವುದು ಮತ್ತು ರೈತರ ಮಕ್ಕಳು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ.85 ಅಂಕ ಪಡೆದು ಉತ್ತೀರ್ಣರಾದರೇ ಅವರನ್ನು ಸನ್ಮಾನಿಸಲಾಗುವುದು ಎಂದು ಸಭೆಗೆ ತಿಳಿಸಿದರು
ಸಂಘದ ಷೇರುದಾರ ರೈತರಾದ ಕರ್ತಾಳು ಮಧು ಸೇರಿದಂತೆ ಮತ್ತಿತರರು ಮಾತನಾಡಿ ಸಂಘಕ್ಕೆ ರೈತರು ಸಾಲ ಮರುಪಾತಿಗೆ 1 ತಿಂಗಳ ಮುಂಚೆಯೇ ಮಾಹಿತಿ ನೀಡಿ ತಿರುವಳಿಕೆಗೆ ಅವಕಾಶ ಕಲ್ಪಿಸ ಬೇಕೆಂದು ಎಂದು ಕೋರಿದಾಗ ಇದಕ್ಕೆ ಉತ್ತರ ನೀಡಿದ ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್ ಮುಂದಿನ ದಿನದಲ್ಲಿ ಇದನ್ನು ಸರಿಪಡಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಹೊಸೂರು ಎಂ.ಡಿ.ಸಿ.ಸಿ.ಬ್ಯಾಂಕ್ ವ್ಯವಸ್ಥಾಪಕ ಆಯಿರಹಳ್ಳಿ ಪ್ರತಾಪ್ , ಸಂಘದ ಉಪಾಧ್ಯಕ್ಷರಾದ ನರೇಂದ್ರಬಾಬು,ಕರೀಗೌಡ,ಪಾಂಡುರಂಗ,ಪ್ರೇಮಮ್ಮಭಾಸ್ಕರ್, ನವೀನ ,ರಾಜಯ್ಯ ನೀಲಮ್ಮ,ಕುಮಾರಸ್ವಾಮಿ, ಸಿದ್ದಯ್ಯ ಸಂಘದ ಸಿಇಓ ಎಚ್.ಪಿ.ನಂಜುಂಡಸ್ವಾಮಿ,ಸಿಬ್ಬಂದಿಗಳಾದ ರಾಧ,ಕಿರಣ್ ಇದ್ದರು.