ಅಭಿಮಾನ ಮೆರೆದ ಕ್ಷೇತ್ರದ ಜನತೆ
ಹನೂರು: ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಆರ್ ನರೇಂದ್ರ ರವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಭಾವಗೊಂಡರೂ ಕ್ಷೇತ್ರದ ಜನತೆ ಅವರ ಮೇಲೆ ಇಟ್ಟಿರುವ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ.
ಹೌದು ಆರ್ ನರೇಂದ್ರನವರು ಸತತವಾಗಿ ಮೂರು ಬಾರಿ ಶಾಸಕರಾಗಿ, ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋಲುಂಡರೂ ಕ್ಷೇತ್ರದ ಜನತೆ ಅವರ ಮೇಲೆ ಇನ್ನೂ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಉದಾಹರಣೆ ಎಂಬಂತೆ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಶಾಂತಿ ಹಾಗೂ ಪತಿ ಶಿವು ತಮ್ಮ ಮಗಳ ವಿವಾಹವನ್ನು ಜೂನ್ ಮೂರರಂದು ಕೊಳ್ಳೇಗಾಲದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಿದ್ದಾರೆ.
ಮದುವೆಯ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮಾಜಿ ಶಾಸಕ ಆರ್ ನರೇಂದ್ರ ಭಾವಚಿತ್ರವನ್ನು ಹಾಕಿಸಿ ಕೇಸರಿ ಬಿಳಿ ಹಸಿರು ಮಿಶ್ರಿತ ಕಾರ್ಡ್ ಮುದ್ರಣ ಮಾಡಿಸಿ ಸಂಬಂಧಿಗಳು ಹಾಗೂ ಸ್ನೇಹಿತರುಗಳಿಗೆ ನೀಡಿ ಮದುವೆಗೆ ಆಹ್ವಾನ ನೀಡುತ್ತಿರುವುದು ಗಮನ ಸೆಳೆದಿದೆ.
ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುದ್ರಿಸಿದ್ದರೆ ಇನ್ನು ವಿಶೇಷವಾಗಿರುತ್ತಿತ್ತು ಎಂದು ಕೆಲವರು ಮಾತನಾಡಿಕೊಂಡಿರುವುದು ಉಂಟು.
ನಮ್ಮ ನಾಯಕರಾದ ಆರ್ ನರೇಂದ್ರ ರವರ ದೊಡ್ಡಪ್ಪ ದಿ ಜಿ ವೆಂಕಟೇಗೌಡ, ದಿವಂಗತ ಮಾಜಿ ಸಚಿವ ರಾಜುಗೌಡ ರವರನ್ನು ಇಂದಿಗೂ ಕ್ಷೇತ್ರದಲ್ಲಿ ನೆನೆಸಿಕೊಳ್ಳುತ್ತೇವೆ ಅದರಂತೆ ಆರ್ ನರೇಂದ್ರರವರು ಕಳೆದ ಚುನಾವಣೆಯಲ್ಲಿ ಸೋಲುಂಡರು ಅವರೇ ನಮ್ಮ ಶಾಸಕರು, ಅವರ ಕುಟುಂಬದ ಮೇಲೆ ಇಟ್ಟಿರುವ ಅಭಿಮಾನ ಎಂದಿಗೂ ಕಡಿಮೆಯಾಗುವುದಿಲ್ಲ.
ಶಿವು ಕಾಂಗ್ರೆಸ್ ಮುಖಂಡರು.
ಕಳೆದ ಐವತ್ತು ವರ್ಷಗಳಿಂದ ಹನೂರು ವಿಧಾನಸಭಾ ಕ್ಷೇತ್ರದ ಜನತೆಯ ಅಭಿವೃದ್ಧಿಗಾಗಿ ನಮ್ಮ ಕುಟುಂಬವೇ ಹಗಲಿರುಳು ಶ್ರಮಿಸುತ್ತಿದ್ದೇವೆ ಚುನಾವಣೆಯಲ್ಲಿ ಸೋಲು ಗೆಲುವು ಎಂಬುದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಆಧಾರ ಸ್ಥಂಭ ಅವರನ್ನು ಎಂದಿಗೂ ಕೈ ಬಿಡುವ ಪ್ರಶ್ನೆಯೇ ಇಲ್ಲ, ನಾನು ಇರುವವರೆಗೂ ಕಾರ್ಯಕರ್ತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತೇನೆ, ಇದನ್ನು ಬಿಟ್ಟು ನನಗೆ ಬೇರೆ ಕೆಲಸವಿಲ್ಲ.
ಆರ್ ನರೇಂದ್ರ ಮಾಜಿ ಶಾಸಕರು