ಹಾಸನ : ಪ್ರಸಿದ್ಧ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಇದೀಗ ತೆರೆದಿದ್ದು, ದೇವಾಲಯಕ್ಕೆ ಅರ್ಚಕರ ತಂಡ ಪೂಜಾ ಸಾಮಗ್ರಿಗಳನ್ನು ತಂದಿದ್ದು, ಮಂಗಳವಾದ್ಯಗಳೊಂದಿಗೆ ಪೂಜಾ ಸಾಮಗ್ರಿಗಳ ಸಮೇತ ಆಗಮಿಸಿ ಅರ್ಚಕರು, ಪ್ರಧಾನ ಅರ್ಚಕ ನಾಗರಾಜ ನೇತ್ರತ್ವದಲ್ಲಿ ದೇಗುಲದ ಬಾಗಿಲು ತೆರೆಯಲಾಯಿತು.
ಅರ್ಚಕರು ಮುತ್ತೈದೆಯರ ಜೊತೆಗೆ ಪೂಜಾ ಸಾಮಗ್ರಿಗಳನ್ನು ತಂದಿದ್ದಾರೆ. ಅರ್ಚಕರಿಂದ ಪೂಜೆ ನೆರವೇರಿಸಿದ ಬಳಿಕ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಈ ವೇಳೆ ಆಡಿ ಚುಂಚನಗಿರಿ ಮಠದ. ಪೀಠಾಧ್ಯಕ್ಷ ನಿರ್ಮಲಾನಂದನಾಥ್ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ, ಸಂಸದ ಶ್ರೇಯಸ್ ಪಟೇಲ್, ಹಾಸನ ಡಿಸಿ ಎಸ್.ಪಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ತೆರೆಯಲಾಯಿತು. ಅಕ್ಟೊಬರ್ 23 ವೆರೆಗೆ ಹಾಸನಾಂಬೆ ದೇವಿ ಜಾತ್ರೆ ನಡೆಯಲಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಿ.
ಭಕ್ತರ ದರ್ಶನಕ್ಕೆ ವಸ್ತ್ರ ಸಂಹಿತೆ ಜಾರಿ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58ರಡಿಯಲ್ಲಿ ದೇವಸ್ಥಾನದ ರೂಢಿ, ಸಂಪ್ರದಾಯ ಮತ್ತು ಆಚರಣೆಯಂತೆ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ವಸ್ತ್ರ ಸಂಹಿತೆಯನ್ನು ಪಾಲಿಸುವುದು ಸೂಕ್ತವಾಗಿದ್ದು, ಈ ಬಗ್ಗೆ ದಿನಾಂಕ:19.09.2025 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ನಿರ್ಣಯವಾಗಿರುತ್ತದೆ.
ಆದ್ದರಿಂದ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಸೆಕ್ಷನ್ 58 ರಂತೆ ಹಾಸನ ಜಿಲ್ಲೆ ಹಾಸನ ಟೌನ್ ಶ್ರೀ ಹಾಸನಾಂಬ ದೇವಾಲಯದ ಗರ್ಭಗುಡಿ, ಒಳಾಂಗಣ ಮತ್ತು ಹೊರಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿರುವ ದೇವಾಲಯದ ನೌಕರರು ಮತ್ತು ನಿಯೋಜನ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಪುರುಷರು ಪಂಚೆ, ದೋತಿಯಂತಹ ಅಥವಾ ಪೈಜಾಮದಂತಹ ಹಾಗೂ ಮಹಿಳೆಯರು ಸೀರೆ ಮತ್ತು ಚೂಡಿದಾರದಂತಹ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಾತ್ರ ಅವಕಾಶ ಕಲ್ಪಿಸುವುದು. ಯಾವುದೇ ರೀತಿಯ ಕರ್ತವ್ಯ ನಿರತ ಸಿಬ್ಬಂದಿಗಳು ಸಮವಸ್ತ್ರ, ಸಹಿತವಾಗಿ ಗರ್ಭಗುಡಿ ಪ್ರವೇಶಿಸಲು ಅವಕಾಶವಿರುವುದಿಲ್ಲ.
ಜನದಟ್ಟಣೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಉದ್ದೇಶದಿಂದ ಶಿಷ್ಟಾಚಾರ ದರ್ಶನದ ಸಮಯದಲ್ಲಿ ಮಾತ್ರ ಈ ಹಿಂದಿನAತೆ ಶಿಷ್ಟಾಚಾರದಂತೆ ಗರ್ಭಗುಡಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು, ಉಳಿದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಅಥವಾ ದೇವಾಲಯದ ಆಡಳಿತಾಧಿಕಾರಿಯವರು ಲಿಖಿತ ಅನುಮತಿ ನೀಡಿದಲ್ಲಿ ಮಾತ್ರ ಗರ್ಭಗುಡಿಗೆ ಪ್ರವೇಶಿಸಲು ನಿಯಮಾನುಸಾರ ಅವಕಾಶ ನೀಡಲು ಸೂಚಿಸಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ಶ್ರೀ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸದಲ್ಲಿ ನಿಯೋಜಿತಗೊಂಡ ಕರ್ತವ್ಯ ನಿರತ ಸಿಬ್ಬಂದಿಗಳು ಮಾನ್ಯ ಆಯುಕ್ತರ ಆದೇಶದಂತೆ ಕ್ರಮವಹಿಸಲು ಸೂಚಿಸಿದ್ದು ಹಾಗೂ ಇಲಾಖಾ ಮುಖ್ಯಸ್ಥರು ನಿಯೋಜಿತ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಲತಾ ಕುಮಾರಿ ಅವರು ಆದೇಶಿಸಿದ್ದಾರೆ.

ಭಕ್ತರ ದರ್ಶನಕ್ಕೆ ವಸ್ತ್ರ ಸಂಹಿತೆ ಜಾರಿ: