Friday, October 10, 2025
Google search engine

Homeಅಪರಾಧಹಾವೇರಿ: ಇನ್ಸೂರೆನ್ಸ್ ಆಸ್ತಿಗಾಗಿ ಅಳಿಯನ ಕೊಲೆ : ಮಾವ ಮತ್ತು ಗ್ಯಾಂಗ್ ಸದಸ್ಯರ ಬಂಧನ

ಹಾವೇರಿ: ಇನ್ಸೂರೆನ್ಸ್ ಆಸ್ತಿಗಾಗಿ ಅಳಿಯನ ಕೊಲೆ : ಮಾವ ಮತ್ತು ಗ್ಯಾಂಗ್ ಸದಸ್ಯರ ಬಂಧನ

ಹಾವೇರಿ : ಇನ್ಸೂರೆನ್ಸ್ ಆಸ್ತಿ ಮನೆ ಮತ್ತು ಜಮೀನಿನಗಾಗಿ ಅಳಿಯನನ್ನೇ ಕೊಲೆ ಮಾಡಲಾಗಿದೆ. ಅಳಿಯನನ್ನು ಕೊಲೆ ಮಾಡಿಸಿದ್ದ ಮಾವ ಮತ್ತು ಗ್ಯಾಂಗ್ ಅರೆಸ್ಟ್ ಆಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿತ್ತು. ಬಸವರಾಜ್ ಪುಟ್ಟಪ್ಪನವರ್ ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಿ ಕಥೆ ಕಟ್ಟಿದರು ಅಪಘಾತದಲ್ಲಿ ಸಾವು ಎಂದು ಆರೋಪಿಗಳು ಬಿಂಬಿಸಿದ್ದಾರೆ.

ಸೆಪ್ಟೆಂಬರ್ 27 ರಂದು ಬಸವರಾಜ್ ಮರ್ಡರ್ ನಡೆದಿದೆ. ಬಸವರಾಜ್ಗೆ ಕಂಠಪೂರ್ತಿ ಕುಡಿಸಿ ಕಾರಿನಿಂದ ಗುದ್ದಿಸಿದ್ದಾರೆ.ಬಳಿಕ ಅಪಘಾತದಲ್ಲಿ ಸಾವನಪ್ಪಿದ್ದಾನೆ ಎಂದು ಆರೋಪಿಗಳು ಬಿಂಬಿಸಿದ್ದಾರೆ ದೂರದಲ್ಲಿ ಈ ಒಂದು ಕೊಲೆ ಮಾಡಿದ್ದಾರೆ. ರಾಘವೇಂದ್ರ ಬಾಳಗುಂಡರ, ಪ್ರವೀಣ್, ಸಿದ್ದನಗೌಡ ಹಲಗೇರಿ ಲೋಕೇಶ್ ಎಂಬಾತರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಉದಾರಣೆ ವೇಳೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಾಲ್ವರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

RELATED ARTICLES
- Advertisment -
Google search engine

Most Popular