Sunday, October 12, 2025
Google search engine

Homeರಾಜ್ಯಸುದ್ದಿಜಾಲಎಚ್.ಡಿ.ಕೋಟೆ: ಭಾರತೀಯ ಸಮಾಜದ ದಿಕ್ಕು ಬದಲಿಸಿದ ಐತಿಹಾಸಿಕ ಶತಮಾನ ಪ್ರಯಾಣ : ಕಾಶಿ ಮಹೇಶ್

ಎಚ್.ಡಿ.ಕೋಟೆ: ಭಾರತೀಯ ಸಮಾಜದ ದಿಕ್ಕು ಬದಲಿಸಿದ ಐತಿಹಾಸಿಕ ಶತಮಾನ ಪ್ರಯಾಣ : ಕಾಶಿ ಮಹೇಶ್

ವರದಿ ಎಡತೊರೆ ಮಹೇಶ್

ಎಚ್.ಡಿ.ಕೋಟೆ : ಈ ಶತಮಾನ ಪ್ರಯಾಣವು ಭಾರತೀಯ ಸಮಾಜದ ದಿಕ್ಕನ್ನೇ ಬದಲಾಯಿಸಿದ ಐತಿಹಾಸಿಕ ಅಧ್ಯಾಯ ಎಂದು ಸಂಘದ ಮೈಸೂರು ವಿಭಾಗದ ಸೇವಕ ಕಾಶಿ ಮಹೇಶ್ ತಿಳಿಸಿದರು.

ತಾಲ್ಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪಟ್ಟಣದ ಗಣಪತಿ ದೇವಸ್ಥಾನ ಹೌಸಿಂಗ್ ಬೋರ್ಡ್ ನಿಂದ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಣವೇಶದಾರರು ಆಕರ್ಷಕ ಪಥಸಂಚಲನ ನಡೆಸಿದ ನಂತರ ಮಾತನಾಡಿದರು. ರಾಷ್ಟ್ರಹಿತ, ಶಿಸ್ತು, ತ್ಯಾಗ ಮತ್ತು ಸಮರ್ಪಣೆಯ ಭಾವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ದ್ಯೆಯವಾಕ್ಯವಾಗಿದೆ ಎಂದರು.

ಸ್ವಯಂ ಸೇವಕರು ಗಣವೇಷಧಾರಿಗಳಾಗಿ ಅತ್ಯಂತ ಶಿಸ್ತಿನಿಂದ ನಮಸ್ತೇ ಸದಾ ವತ್ಸಲೇ ಗೀತೆಯನ್ನು ಹಾಡುತ್ತಾ ಪಥ ಸಂಚಲನದಲ್ಲಿ ಭಾಗಿಯಾದರು. ಆರ್‌ಎಸ್‌ಎಸ್‌ನ ಪಥ ಸಂಚಲನ ನೋಡಲು ದೊಡ್ಡ ಸಂಖ್ಯೆಯಲ್ಲಿ ಜನ ರಸ್ತೆಯ ಎರಡು ಬದಿಗಳಲ್ಲಿ ನಿಂತಿದ್ದು ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯವಾರ ರಮೇಶ್, ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಎಚ್.ಡಿ.ಕೋಟೆ ತಾಲ್ಲೂಕು ಅಧ್ಯಕ್ಷ ಶಂಬೇಗೌಡ, ಸರಗೂರು ತಾಲ್ಲೂಕು ಅಧ್ಯಕ್ಷ ಗುರುಸ್ವಾಮಿ, ಕಾರ್ಯದರ್ಶಿ ಗುರುಸ್ವಾಮಿ, ವೆಂಕಟ್ ಸ್ವಾಮಿ, ಮೊತ್ತ ಬಸವರಾಜು, ಜಗದೀಶ್, ಸಂತೋಷ್ ಕುಮಾರ್, ಜಯಂತ್ ಕುಮಾರ್, ಡೈರಿ ಶ್ರೀಕಾಂತ್, ಪೃಥ್ವಿರಾಜ್, ಪೂರ್ಣೇಶ್, ಸಿದ್ದೇಶ್ವರ, ರಾಹುಲ್ ನಾಯಕ್, ಹೈರಿಗೆ ಪ್ರಕಾಶ್, ಡಿಪಿ ಕುಪ್ಪೆ ಬಸವರಾಜು, ಶಿವರಾಜ್, ಮಾದಪ್ಪ, ಹಂಚಿಪುರ ಗುರುಸ್ವಾಮಿ, ರಾಜು ಬಿಡುಗಲು, ಗೋಪಾಲಯ್ಯ, ಸತೀಶ್ ಬಹದ್ದೂರ್, ಶ್ರೀರಾಮುಲು, ವಕೀಲ ನಾಗೇಶ್, ಅನಿಲ್ ಜಿ, ನಾರಾಯಣ್ ಲಾಲ್, ಪುಟ್ಟೇಗೌಡ, ಎಚ್ ಪಿ ಬಸವರಾಜು, ಶ್ರೀನಿಧಿ, ಶ್ರೀನಾಥ್, ಗುರು, ನಾರಾಯಣ, ನಂದೀಶ್, ಮಹೇಶ್, ವಿಷ್ಣು ಟೈಗರ್ ಬ್ಲಾಕ್ ವಿಷ್ಣು , ಅರ್ಜುನ್ , ಸುಧಾಕರ, ಅನೀಶ್ , ಗುರುರಾಜ್ , ದೇವ , ಹೇಮಂತ್ ,ಹಾಗೂ ಮುಖಂಡರು ಸ್ವಯಂಸೇವಕ ಸಂಘದ ಪ್ರಮುಖರು ಮತ್ತು ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular