ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ: ಹೆಚ್.ಡಿ.ಕೋಟೆಯ ತಾಲ್ಲೂಕು,ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್.ಡಿ.ಕೋಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಹೆಚ್.ಡಿ ಕೋಟೆ, RBSK ವೈದ್ಯಾಧಿಕಾರಿಗಳ ಮತ್ತು ತಂಡದವರ ವತಿಯಿಂದ ಜಿಲ್ಲಾ ಆರಂಭಿಕ ಮಧ್ಯಸ್ಥಿಕೆ ಕೇಂದ್ರ,ಜಿಲ್ಲಾ ಆಸ್ಪತ್ರೆ ,ಮೈಸೂರು,ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮುಮೆಂಟ್ ಸರಗೂರು ಸಹಯೋಗದೊಂದಿಗೆ ,ಕಡಿಮೆ ತೂಕದ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ವನ್ನು ಆಯೋಜಿಸಲಾಯಿತು.

ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾಕ್ಟರ್”ರವಿಕುಮಾರ್ ಟಿ.ರವರು ಮಾತನಾಡಿ
ಈ ಶಿಬಿರದಲ್ಲಿ ಆರು ತಿಂಗಳಿಂದ ಆರು ವರ್ಷದ ಒಳಗಿನ ಕಡಿಮೆ ತೂಕದ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಜಿಲ್ಲಾ ಆಸ್ಪತ್ರೆ ಯ ಮಕ್ಕಳ ತಜ್ಞರಿಂದ ತಪಾಸಣೆಯನ್ನು ಮಾಡಲಾಗುತ್ತದೆ, ವಯಸ್ಸಿಗೆ ಅನುಗುಣವಾಗಿ ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು, ಹಾಗೂ ಅತಿ ಕಡಿಮೆ ಉಳ್ಳ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಎನ್ ಆರ್ ಸಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುವುದು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಕಡಿಮೆ ತೂಕದ ಮಕ್ಕಳನ್ನು ಉತ್ತಮ ತೂಕಕೆ ತರುವುದು ಎಂದು ತಿಳಿಸಿದರು. ಹಾಗೂ ಮಕ್ಕಳನ್ನು ಪೋಷಕರು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಹುಟ್ಟಿದಾಗಿನಿಂದ ಒಂದು ವರ್ಷದ ತನಕ ಆಸ್ಪತ್ರೆ ನೀಡುವ ಎಲ್ಲಾ ಚುಚ್ಚುಮದ್ದುಗಳನ್ನು ಕೊಡಿಸಬೇಕು, ಲಸಿಕೆ ಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ನಂತರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ”ಸೋಮಣ್ಣ ರವರು ಮಾತನಾಡಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮತ್ತು ಹುಟ್ಟಿದ ಆರು ತಿಂಗಳ ತನಕ ಎದೆಹಾಲನ್ನು ಬಿಟ್ಟು ಬೇರೇನು ನೀಡಬಾರದು, ಆರು ತಿಂಗಳ ನಂತರ ಮನೆಯಲ್ಲೇ ಪೌಷ್ಟಿಕ ಆಹಾರವನ್ನು ತಯಾರಿಸಿ ಮಗುವಿಗೆ ನೀಡಬೇಕು , ಕಾಲಕಾಲಕ್ಕೆ ಆಸ್ಪತ್ರೆಯಲ್ಲಿರುವ ಲಸಿಕೆಯನ್ನು ಕೊಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞರಾದ ಡಾ. ಸಂಪತ್ ಕುಮಾರ್ ರವರು ಮಾತನಾಡಿ ಪೋಷಕರು ಮಕ್ಕಳು ಕಡಿಮೆ ತೂಕಕ್ಕೆ ಬರುವ ಮುಂಚೆ ನೀವು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಮನೆಯಲ್ಲೇ ಪೌಷ್ಟಿಕ ಆಹಾರವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮುಮೆಂಟ್ ನ ವೈದ್ಯಾಧಿಕಾರಿಗಳಾದ ಡಾ” ಅಭಿಲಾಶ್, ಜಿಲ್ಲಾ ಆಸ್ಪತ್ರೆಯ ಡಿಇಐಸಿ ಮೇಲ್ವಿಚಾರಕರಾದ ಲೋಕೇಶ್ ,RBSK ವೈದ್ಯಾಧಿಕಾರಿಗಳಿಂದ ಡಾ. ಮೋಹನ್, ಡಾ” ಹೇಮಲತಾ ಡಾ” ರಮ್ಯಾ, ಮತ್ತು ಸಿಬ್ಬಂದಿ ವರ್ಗದವರು, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು , ಕಡಿಮೆ ತೂಕದಮಕ್ಕಳು, ಪೋಷಕರು ಇನ್ನಿತರರು ಹಾಜರಿದ್ದರು.