Monday, August 11, 2025
Google search engine

Homeರಾಜ್ಯಸುದ್ದಿಜಾಲಮಿರ್ಲೆ ಗ್ರಾಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

ಮಿರ್ಲೆ ಗ್ರಾಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ‌ ಮಿರ್ಲೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರ 59 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಮಿರ್ಲೆ ಗ್ರಾಮದಲ್ಲಿ ಮಾಲ ಮೆಡಿಸನ್ಸ್ ನ ಅವರಣಲ್ಲಿ ಮೈಸೂರಿನ ಕೆ.ಅರ್.ಆಸ್ವತ್ರೆಯ ರಕ್ತ ನಿಧಿ ಕೇಂದ್ರ ಮತ್ತು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ 17 ಮಂದಿ ರಕ್ತದಾನ ಮಾಡಿದರು
ನಂತರ ಸಾಲಿಗ್ರಾಮದ ಪೋಕಸ್ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕೆ.ಆರ್.ನಗರ ಸಮೃದ್ದಿ ಆಸ್ವತ್ರೆಯ ಸಹಯೋಗದಲ್ಲಿ 130 ಮಂದಿಗೆ ಮಧುಮೇಯ ಮತ್ತು ಬಿ.ಪಿ ಪರೀಕ್ಷೆಯನ್ನು ನಡೆಸಿ ಮಾತ್ರೆ ವಿತರಿಸಿ ಇವುಗಳ ನಿಯಂತ್ರಣಕ್ಕೆ ಅನುಸರಿಸ ಬೇಕಾದ ಆಹಾರ ಪದ್ದತಿ ಮತ್ತು ವ್ಯಾಯಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು
ಕಾರ್ಯಕ್ರಮವನ್ನು‌ ಉದ್ಘಾಟಿಸಿದ ಮೂಳೆ ತಜ್ಞ ಡಾ.ಧನುಷ್ ಮಾತನಾಡಿ ಕೆ.ಅರ್.ನಗರ ಕ್ಷೇತ್ರದಲ್ಲಿ ಸಾ.ರಾ.ಮಹೇಶ್ ಅವರು ಮಾಡಿರುವ ಜನ ಸೇವೆ ಹಾಗು ಅಭಿವೃದ್ಧಿ ಕೆಲಸಗಳ ಬಗ್ಗೆ ಜನರು ತೋರುವ ಪ್ರೀತಿಗೆ ತಮ್ಮ ಕುಟುಂಬ ಸದಾ ಚಿರ ಋಣಿ ಅಗಿರುತ್ತದೆ ಎಂದರಲ್ಲದೇ ಇವರ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣಾ ಶಿಭಿರವನ್ನು ಏರ್ಪಡಿಸಿರುವ ಮಾಲ ಮೆಡಿಸನ್ಸ್ ನ ರತನ್ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಸಾ.ರಾ.ಮಹೇಶ್ ಅವರನ್ನು ಅಭಿನಂಧಿಸಿ ಗ್ರಾಮಸ್ಥರು ಶುಭ ಕೋರಿದರು ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಸದಸ್ಯೆ ಶೋಭಾ ಕೋಟೆ ಗೌಡ, ಗ್ರಾ.ಪಂ.ಅಧ್ಯಕ್ಷ ಬಾಲು, ಸದಸ್ಯೆ ಮಂಗಳಾ, ಜೆಡಿಎಸ್ ಮುಖಂಡರಾದ ಮಿರ್ಲೆ ಧನಂಜಯ , ರಾಧಕೃಷ್ಣ, ಹೊಸಟ್ಟಿರಘು, ಮೋಹನ್ .ಮೂತ್ತೂಟ್ ರಂಗಸ್ವಾಮಿ, ಕುನ್ನೇಗೌಡ, ವಾಸು, ವಿಜಿಯಮ್ಮ, ತುಕರಾಂ, ಅರ್ಜುನ್, ಭರತ್, ಶಿವು, ಗೌತಮ್, ಪೋಟೋ ರಾಜು,ನಾಗೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular