ಮಂಡ್ಯ: ಮದ್ದೂರಿನ ಕೊಪ್ಪದಲ್ಲಿನ ಖಾಸಗಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ನಕಲಿ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ.
ಮದ್ದೂರು ತಾಲೂಕು ಆರೋಗ್ಯಾಧಿಕಾರಿ ರವೀಂದ್ರ ನೇತೃತ್ವದಲ್ಲಿ ಕ್ಲಿನಿಕ್ ಮೇಲೆ ದಾಳಿ ನಡೆಸಲಾಗಿದ್ದು, ದಾಳಿಯ ವೇಳೆ ನಕಲಿ ವೈದ್ಯ ಕಕ್ಕಾಬಿಕ್ಕಿಯಾಗಿದ್ದಾನೆ.

ಉತ್ತರ ಪ್ರದೇಶ ಮೂಲದ ಧೀರಜ್ ಕುಮಾರ್ ಎಂಬಿಬಿಎಸ್ ಪದವಿ ಪಡೆಯದೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನಾಗಿದ್ದು, ದಾಳಿ ವೇಳೆ ಈತನನ್ನು ಶಕ್ಕೆ ಪಡೆಯಲಾಗಿದೆ.
ಕ್ಲಿನಿಕ್’ನಲ್ಲಿದ್ದ ಸಿರಿಂಜ್, ಐಪಿ ಡ್ರಿಪ್, ಇಂಜೆಕ್ಷನ್, ಮಾತ್ರೆಗಳನ್ನು ಜಪ್ತಿ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಲಿನಿಕ್ ಗೆ ಬಂದ್ ಮಾಡಿಸಿ ಬೀಗ ಜಡಿದಿದ್ದಾರೆ.