Wednesday, January 14, 2026
Google search engine

Homeಸ್ಥಳೀಯಕರ್ತವ್ಯದ ವೇಳೆ ಹೃದಯಾಘಾತ: ಮಂಡ್ಯ ಮೂಲದ ಬಿಎಸ್‌ಎಫ್ ಯೋಧ ಮಾದೇಗೌಡ ನಿಧನ

ಕರ್ತವ್ಯದ ವೇಳೆ ಹೃದಯಾಘಾತ: ಮಂಡ್ಯ ಮೂಲದ ಬಿಎಸ್‌ಎಫ್ ಯೋಧ ಮಾದೇಗೌಡ ನಿಧನ

ಮಂಡ್ಯ: ಮಹಾರಾಷ್ಟ್ರದ ಚಾಕೋರು ಜಿಲ್ಲೆಯ ಲಾತೂರ್‌ನ ಬಿಎಸ್‌ಎಫ್ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಡ್ಯ ಮೂಲದ ಬಿಎಸ್‌ಎಫ್ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಂಡ್ಯ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ ಮಾದೇಗೌಡ (44) ಮೃತ ಯೋಧ. ಕರ್ತವ್ಯದ ಸಮಯದಲ್ಲಿ ಹೃದಯಾಘಾತದಿಂದ ಯೋಧ ಮೃತಪಟ್ಟಿದ್ದಾರೆ. ಮಾದೇಗೌಡ 2000ರಲ್ಲಿ ಮೈಸೂರಿನಲ್ಲಿ ನಡೆದ ಬಿಎಸ್‌ಎಫ್ ಸೇನಾ ನೇಮಕಾತಿಯಲ್ಲಿ ಆಯ್ಕೆಯಾಗಿದ್ದು, ಕಳೆದ 25 ವರ್ಷಗಳಲ್ಲಿ ದೇಶದ ಹಲವೆಡೆ ಸೇವೆ ಸಲ್ಲಿಸಿದ್ದರು.

ಇಂದು ಯೋಧನ ಮೃತದೇಹ ಮಂಡ್ಯಕ್ಕೆ ಆಗಮಿಸಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ, ಎಸ್ಪಿ ಶೋಭಾರಾಣಿ ಗೌರವ ನಮನ ಸಲ್ಲಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. 

RELATED ARTICLES
- Advertisment -
Google search engine

Most Popular