ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಕರಾವಳಿಯಲ್ಲಿ ಜಲಪಾತಗಳು ಧುಮ್ಮುಕ್ಕಿ ಹರಿಯುತ್ತಿದೆ. ಜಲಪಾತದ ಮೇಲ್ಭಾಗದಲ್ಲಿ ಪ್ರವಾಸಿಗರು ಹುಚ್ಚು ಸಾಹಸ ಮಾಡ್ತಿರೋ ವೀಡಿಯೋ ವೈರಲ್ ಆಗಿದೆ.
ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಐವರನ್ನು ರಕ್ಷಣೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಪುತ್ತಿಗೆ ಗ್ರಾಮದ ಎರುಗುಂಡಿ ಫಾಲ್ಸ್ ನಲ್ಲಿ ನಡೆದಿದೆ.
ಪಾಲಡ್ಕ ಸಮೀಪದ ಎರುಗುಂಡಿ ಫಾಲ್ಸ್ ನಲ್ಲಿ ಏಕಾಏಕಿ ನೀರು ಬಂದ ಹಿನ್ನೆಲೆಯಲ್ಲಿ ಜಲಪಾತದ ಮೇಲ್ಭಾಗದ ಕಲ್ಲುಬಂಡೆಯಲ್ಲಿ ಪ್ರವಾಸಿಗರು ಸಿಲುಕಿದ್ದರು. ರೋಪ್ ಹಾಕಿ ಪ್ರವಾಸಿಗರನ್ನು ಸ್ಥಳೀಯರು
ರಕ್ಷಣೆ ಮಾಡಿದ್ದಾರೆ.