ಮದ್ದೂರು: ಮದ್ದೂರಿನಲ್ಲಿ ವರುಣಾರ್ಭಟಕ್ಕೆ ವಾಹನ ಸವಾರರು ತತ್ತರಗೊಂಡಿದ್ದು, ಬಾರಿ ಮಳೆಗೆ ದಶಪಥ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ವರುಣಾರ್ಭಟಕ್ಕೆ ರಸ್ತೆಗಳೆಲ್ಲ ಜಲಾವೃತ ದಶಪಥ ಹೆದ್ದಾರಿಯಲ್ಲಿ ಸಂಚರಿಸಲು ಆಗದೇ ವಾಹನಗಳು ಸಾಲುಗಟ್ಟಿ ನಿಂತಿವೆ.
ಕಳೆದ ಒಂದು ಗಂಟೆಗಳಿಂದ ಸತತವಾಗಿ ಬಾರಿ ಮಳೆ ಸುರಿಯುತ್ತಿದ್ದು, ಮದ್ದೂರು ಬೈಪಾಸ್ ನ ರಸ್ತೆಯಲ್ಲಿ ಎರಡು ಕಿಲೋಮೀಟರ್ ವಾಹನಗಳು ಸಾಲುಗಟ್ಟಿ ನಿಂತಿವೆ. ಅಂದಾಜು 50ಕ್ಕೂ ಹೆಚ್ಚು ವಾಹನಗಳು ದಾರಿ ಕಾಣದೇ ರಸ್ತೆ ಇಕ್ಕೆಲೆಗಳಲ್ಲಿ ನಿಂತಿವೆ.