ಮೈಸೂರು: ಕೇರಳದ ವೈನಾಡಿನಲ್ಲಿ ಭಾರೀ ಮಳೆಯ ಪರಿಣಾಮ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ ಒಂದೇ ದಿನದಲ್ಲಿ ನಾಲ್ಕು ಅಡಿ ನೀರು ಸೇರಿದೆ.
23,500 ಕ್ಯೂಸೆಕ್ ಒಳಹರಿವಿನಿಂದ ನೀರಿನ ಮಟ್ಟ 67.50 ಅಡಿಯಿಂದ 72.80 ಅಡಿಗೆ ಏರಿಕೆಯಾಗಿದೆ. 84 ಅಡಿ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 71.80 ಅಡಿ ನೀರಿದ್ದು, 12.61 ಟಿಎಂಸಿ ಸಂಗ್ರಹವಾಗಿದೆ. ಒಂದೇ ದಿನದಲ್ಲಿ 2.5 ಟಿಎಂಸಿ ನೀರು ಸೇರುವ ಮೂಲಕ ಜಲಾಶಯ ಶೀಘ್ರವೇ ಭರ್ತಿಯಾಗುವ ನಿರೀಕ್ಷೆಯಿದೆ.
ವರ್ಷಕ್ಕೆ ಎರಡು ಬಾರಿ ತುಂಬುವ ರಾಜ್ಯದ ಏಕೈಕ ಜಲಾಶಯವಾಗಿರುವ ಕಬಿನಿ, ಮೈಸೂರು, ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ನೀರಿನ ಮುಖ್ಯ ಮೂಲವಾಗಿದೆ.