Friday, January 2, 2026
Google search engine

Homeರಾಜ್ಯಏಯ್ ಭರತ್ ರೆಡ್ಡಿಗೆ ಸರಿಯಾಗಿ ಬುದ್ಧಿ ಹೇಳ್ರೀ! ಕಾಂಗ್ರೆಸ್ ಶಾಸಕನ ಮೇಲೆ ಸಿಎಂ ಗರಂ!

ಏಯ್ ಭರತ್ ರೆಡ್ಡಿಗೆ ಸರಿಯಾಗಿ ಬುದ್ಧಿ ಹೇಳ್ರೀ! ಕಾಂಗ್ರೆಸ್ ಶಾಸಕನ ಮೇಲೆ ಸಿಎಂ ಗರಂ!

ಬಳ್ಳಾರಿಯಲ್ಲಿ ಬ್ಯಾನರ್​ ಕಟ್ಟುವ ವಿಚಾರಕ್ಕೆ ಶುರುವಾದ ಗಲಾಟೆ ಕೊನೆಗೆ ಓರ್ವ ಕಾರ್ಯಕರ್ತನ ಸಾವಲ್ಲಿ ಅಂತ್ಯವಾಗಿದ್ದು, ಈ ವೇಳೆ ಗುಂಡಿನ ದಾಳಿಗೆ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಘಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಗರಂ ಆಗಿದ್ದಾರೆ.

ಜೊತೆಗೆ ಪೊಲೀಸರ ಮೇಲೂ ಅಸಮಾಧಾನ ಹೊರಹಾಕಿದ್ದ ಅವರು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಘಟನೆಯ ಮಾಹಿತಿ ನೀಡಲು ತೆರಳಿದ್ದ ವೇಳೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಈ ವೇಳೆ ಫೋನ್ ಮಾಡಿದ್ದರೂ ಸ್ವೀಕರಿಸದ ಸಿದ್ದರಾಮಯ್ಯ ಜಮೀರ್​​ ಮುಂದೆಯೇ ಅಸಮಾಧಾನ ಹೊರ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ಫ್ಲೆಕ್ಸ್​ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಕಾರ್ಯಕರ್ತ ರಾಜಶೇಖರ್​ ಗುಂಡು ತಗುಲಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಶಾಸಕ ಭರತ್ ರೆಡ್ಡಿ ಅವರ ಪಾತ್ರದ ಬಗ್ಗೆ ಆರೋಪಗಳು ಕೇಳಿಬಂದಿವೆ. ಘಟನೆಯ ಪ್ರಾಥಮಿಕ ವರದಿ ತಂದ ಡಿಜಿಪಿ ಡಾ. ಸಲೀಂ ಅಹಮದ್ ಮತ್ತು ಗುಪ್ತಚರ ಇಲಾಖೆ ಡಿಜಿಪಿ ಅವರು ಸಿಎಂಗೆ ಮಾಹಿತಿ ನೀಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಗುಂಡಿನ ದಾಳಿ ಬಗ್ಗೆ ಪೊಲೀಸರ ಮೇಲೂ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಸಣ್ಣ ಘಟನೆ ಇಷ್ಟೊಂದು ದೊಡ್ಡದಾಗೋವರೆಗೂ ಪೊಲೀಸರು ಏನು ಮಾಡುತ್ತಿದ್ದರು? ಅಮಾಯಕ ಯುವಕನ ಜೀವ ಹೋಗಿದೆ ಎಂದು ಸಿಎಂ ಗರಂ ಆಗಿದ್ದಾರೆ.

ಜಮೀರ್ ಅಹಮದ್ ಖಾನ್ ಘಟನೆಯ ಮಾಹಿತಿ ನೀಡಲು ಸಿಎಂ ಭೇಟಿಗೆ ತೆರಳಿದ್ದರು. ಈ ವೇಳೆ ಶಾಸಕ ಭರತ್ ರೆಡ್ಡಿ ಅವರಿಗೆ ಫೋನ್ ಮಾಡಿ ಮಾತನಾಡಿಸಲು ಜಮೀರ್ ಯತ್ನಿಸಿದ್ದಾರೆ. ಆದರೆ ಸಿಎಂ ಫೋನ್ ತೆಗೆದುಕೊಳ್ಳದೆ ಹೋಗ್ರಿ, ಏನು ಭರತ್ ರೆಡ್ಡಿ? ಸರಿಯಾಗಿ ಬುದ್ಧಿ ಹೇಳಿ ಆತನಿಗೆ. ಗಲಾಟೆ ಬೇಕಿರಲಿಲ್ಲ, ಕಾರ್ಯಕರ್ತನ ಸಾವಾಗಿದೆ. ಅವರ ಮನೆ ಮುಂದೆ ಹೋಗಿ ಬ್ಯಾನರ್ ಕಟ್ಟುವುದು ರಾಂಗ್ ಡೈರೆಕ್ಷನ್ ಎಂದು ಗರಂ ಆಗಿದ್ದಾರೆ.

ನಾನು ಭರತ್ ರೆಡ್ಡಿ ಜೊತೆ ಮಾತಾಡಲ್ಲ ಎಂದು ಫೋನ್ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಆದಾಗ್ಯೂ ಸಚಿವ ಜಮೀರ್ ಫೋನ್ ಮಾಡಿ ಮಾತನಾಡಿಸಲು ಯತ್ನಿಸಿದ್ದಾರೆ. ಸಿಎಂ ಗರಂ ಆದ ಬಳಿಕ ಕಂಪ್ಲಿ ಗಣೇಶ್ ಮತ್ತು ನಾಗೇಂದ್ರ ಅವರೊಂದಿಗೆ ಮಾತನಾಡಿದ್ದಾರೆ. ನೀವು ಅಲ್ಲಿ ಪರಿಸ್ಥಿತಿ ಕಂಟ್ರೋಲ್ ಮಾಡಿ. ಸುಮ್ನೆ ಇರಲು ಹೇಳಿ. ಬೇಕಾಬಿಟ್ಟಿ ಮಾತಾಡುವುದನ್ನು ನಿಲ್ಲಿಸಿ ಎಂದು ಇಬ್ಬರು ಶಾಸಕರಿಗೆ ಸೂಚನೆ ನೀಡಿದ್ದಾರೆ.

ಭರತ್ ರೆಡ್ಡಿ ಅವರನ್ನು ಕಂಟ್ರೋಲ್ ಮಾಡುವ ಜವಾಬ್ದಾರಿಯನ್ನು ನಾಗೇಂದ್ರ ಮತ್ತು ಕಂಪ್ಲಿ ಗಣೇಶ್ ಅವರಿಗೆ ವಹಿಸಲಾಗಿದೆ ಬಳ್ಳಾರಿಯಲ್ಲಿ ಕಾರ್ಯಕರ್ತನ ಸಾವು ರಾಜಕೀಯ ಉದ್ವಿಗ್ನತೆಗೆ ಕಾರಣವಾಗಿದ್ದು, ಶಾಸಕ ಭರತ್ ರೆಡ್ಡಿ ಅವರ ವಿರುದ್ಧ ಆರೋಪಗಳು ಕೇಳಿಬಂದಿವೆ.

ಜೊತೆಗೆ ಗಾಲಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಕೂಡ ಕೆರಳಿ ಕೆಂಡವಾಗಿದ್ದು, ಸದ್ಯ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರುವಂತೆ ಸೂಚಿಸಿದ್ದಾರೆ. ಘಟನೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಇನ್ನೂ ಬಳ್ಳಾರಿಯಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಈ ಘಟನೆ ಬಳ್ಳಾರಿ ರಾಜಕೀಯ ಘರ್ಷಣೆಗೆ ಕಾರಣವಾಗಿದೆ. ವಿಪಕ್ಷಗಳು ಸಿಡಿದೆದ್ದಿದ್ದಾರೆ. ಸಿಎಂ ಸಿದ್ದರಾಮಯ್ಯ ಪಕ್ಷದ ಶಾಸಕರನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಸೂಚನೆ ನೀಡಿದ್ದು, ಪರಿಸ್ಥಿತಿ ಸಾಮಾನ್ಯಗೊಳ್ಳಲು ಸಚಿವರು ಮತ್ತು ಶಾಸಕರು ಪ್ರಯತ್ನಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular