ಮದ್ದೂರು: ನಾಯಿ ತಿನ್ನುವ ಬಿಸ್ಕೆಟ್ ಅನ್ನು ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ನಾಯಕರು ತಿನ್ನಿಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ಅರಿತು ಹಾಗೂ ಕಾಂಗ್ರೆಸ್ ಪಕ್ಷದಿಂದ ಅಪಾರ ನೋವು ಅನುಭವಿಸಿದ ನಮ್ಮ ದೊಡ್ಡಪ್ಪ ಎಸ್ ಎಮ್ ಕೃಷ್ಣ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್ ಗುರುಚರಣ್ ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಚಾಟಿಸಿದ್ದಾರೆ.
ತಾಲೂಕಿನ ಗ್ರಾಮದಲ್ಲಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಹೈಕಮಾಂಡ್ ನಾಯಕರ ಮನೆಯಲ್ಲಿ ನಾಯಿಗೆ ತಿನ್ನಿಸುವ ಬಿಸ್ಕೆಟ್ ಅನ್ನು ಕಾಂಗ್ರೆಸ್ ನಾಯಕರಿಗೆ ತಿನ್ನಿಸಲಾಗುತ್ತದೆ. ಹಾ ಬಿಸ್ಕೆಟ್ ಗೆ ಆಸೆ ಪಟ್ಟವರು ಕಾಂಗ್ರೆಸ್ ನಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್ ಗುರು ಚರಣ್ ಆರೋಪಿಸಿದರು.
ನಾವು ಮತ್ತು ಬಿಜೆಪಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದಾಗಿದ್ದರೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಸ್ತಿತ್ವ ಪಡೆದುಕೊಳ್ಳುತ್ತಿತ್ತು. ಕಾಂಗ್ರೆಸ್ ಪಕ್ಷದಂತ ಮೋಸದ ಪಕ್ಷ ಮತ್ತೊಂದಿಲ್ಲ ಕಾಂಗ್ರೆಸ್ ನಾಯಕರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ ಮಾತೊಂದು ಕೃತಿಯೊಂದು ಹಿರಿಯ ಕಾಂಗ್ರೆಸ್ ಪಕ್ಷದ ನಾಯಕರಾದ ಬಿ. ರಾಮಕೃಷ್ಣ ವಿಧಾನ ಪರಿಷತ್ ಸದಸ್ಯ ಮಧು.ಜಿ ಮಾದೇಗೌಡ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಕ್ಷೇತ್ರದ ಜನ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ದೇಶವನ್ನು ಕಾಯಲು ಮೋದಿ ರೈತರನ್ನು ಕಾಯಲು ಕುಮಾರಸ್ವಾಮಿ ಎಂಬುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಲೋಕಸಭಾ ಚುನಾವಣೆಯಲ್ಲಿ ಮಾಡಬಾರದು. ಜನ ಬಳಕೆಯ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿ ಮಧ್ಯದ ಬಲೆಯನ್ನು ಹೆಚ್ಚಿಸಿ ಅದರಿಂದ ಬಂದ ಆದಾಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತದೆ ಪ್ರತಿಯೊಬ್ಬರ ಮೇಲೆ ಸಾಲದ ಹೊರೆಯನ್ನು ಹೋರಿಸಿ ಸಾಲ ಮಾಡಿ ಆದರು ತುಪ್ಪ ತಿನ್ನು ಎನ್ನುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ದಿನದ ಕೂಲಿಗಾಗಿ ತಾವು ಪರದಾಡದೆ ವರ್ಷದ ಕೂಲಿಗಾಗಿ ಕುಮಾರಣ್ಣ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ರೈತರು ಆತ್ಮಹತ್ಯೆ ಮಾಡಿಕೊಂಡಾಗ ತಮ್ಮ ಸ್ವಂತ ಹಣದಲ್ಲಿ ಪರಿಹಾರ ನೀಡುವ ಮೂಲಕ ರಾಜ್ಯದ ಜನರ ಪರವಾಗಿದ್ದರು ಎಂದು ಸ್ಮರಿಸಿದರು.
ನರೇಂದ್ರ ಮೋದಿ ,ಅಮಿತ್ ಶಾ ಅವರ ಪಕ್ಕದಲ್ಲಿ ಕುಮಾರಸ್ವಾಮಿ ಅವರು ಮಂತ್ರಿಯಾಗಿ ಕೂರಬೇಕೋ ಅಥವಾ ಸಂಸದರಾಗಿ ಯಾವುದ ಮೂಲೆಯಲ್ಲಿ ಕೂತು ಬರಬೇಕು ಎಂಬುದನ್ನು ಕ್ಷೇತ್ರದ ಜನ ತೀರ್ಮಾನ ಮಾಡಬೇಕು. ಗುತ್ತಿಗೆದಾರನಿಗೆ ಬಗೆಯುವುದು ಅಷ್ಟೇ ಗೊತ್ತು ಅಭಿವೃದ್ಧಿ ಏನು ಗೊತ್ತಿದೆ ಕುಮಾರಸ್ವಾಮಿಯವರಿಗೆ ರೈತ ಮತ್ತು ಜನಪರವಾದ ಕಾಳಜಿ ಗೊತ್ತು ಹಾಗಾಗಿ ಗುತ್ತಿಗೆದಾರನನ್ನು ಬೆಂಬಲಿಸದೆ ಹೃದಯವಂತರನ್ನು ಬೆಂಬಲಿಸಬೇಕು ಎಂದರು.
ಜೆಡಿಎಸ್ ಮತ್ತು ಬಿಜೆಪಿ ನಾಯಕರು ನಾವೆಲ್ಲರೂ ಕೂಡ ಒಂದಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ಹಾಲು ಜೈನಿನಂತೆ ಒಂದಾಗಿದೆ ಆದ್ದರಿಂದ ನೀವೆಲ್ಲರೂ ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು.
ನಾನು ಎಂದಿಗೂ ದ್ವೇಷದ ರಾಜಕಾರಣವನ್ನು ಮಾಡಿಲ್ಲ ಮುಂದೆಯೂ ಈ ರಾಜ್ಯ ಸರ್ಕಾರ ಹೆಚ್ಚು ದಿನ ನಡೆಯುವುದಿಲ್ಲ ನಾಟಕ ಮುಗಿದ ನಂತರ ಅವರವರ ಮನೆಗೆ ಹೋಗುವ ರೀತಿಯಲ್ಲಿ. ನಾಟಕ ಮುಗಿದಿದೆ ಬಣ್ಣ ಕಳೆಯಬೇಕು ಅಷ್ಟೇ ಎಂದು ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ವೆಂಕಟರಮಣಿ ಗೌಡ ಸ್ಟಾರ್ ಚಂದ್ರ ಅವರನ್ನು ಕಾಂಗ್ರೆಸ್ ಪಕ್ಷದವರು ಹರಕೆ ಕುರಿ ಮಾಡಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಮಾಡಿದ್ದಾರೆ. ಕುಮಾರಸ್ವಾಮಿಯವರ ಅಲೆಯ ಮುಂದೆ ಅದು ಕೊಚ್ಚಿ ಹೋಗುತ್ತದೆ ಏಪ್ರಿಲ್ 26ರಂದು ನಡೆಯುವ ಚುನಾವಣೆಯಲ್ಲಿ ಕುಮಾರಸ್ವಾಮಿಯವರನ್ನು ಬೆಂಬಲಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜೆಡಿಎಸ್ ಪಕ್ಷದ ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ ಸಂದೇಶ್ ಹೊಸಕೆರೆ ಕಾಳಯ್ಯ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಾಮನಹಳ್ಳಿ ಸ್ವಾಮಿಗೌಡ ಬಿಳಿಯಪ್ಪ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸತೀಶ್ ಮುಖಂಡರಾದ ಪ್ರಿಯಾಂಕ ಅಪ್ಪು ಪಿ ಗೌಡ, ತಾಲೂಕು ಮಹಿಳಾ ಜೆಡಿಎಸ್ ಘಟಕದ ಅಧ್ಯಕ್ಷ ದಿವ್ಯ ರಾಮಚಂದ್ರ ಶೆಟ್ಟಿ, ಮುಖಂಡರಾದ ಕೆಂಗಲ್ ಗೌಡ, ಶಿವಲಿಂಗಯ್ಯ, ಹಳ್ಳಿಕೆರೆ ಮಾದೇಶ್ ಸೇರಿದಂತೆ ಇತರರಿದ್ದರು.