Thursday, January 8, 2026
Google search engine

Homeವಿದೇಶರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿ ಮಾಡಿರುವುದಕ್ಕೆ ಹೆಚ್ಚಿನ ಸುಂಕ..! ಮೋದಿಗೆ ನನ್ನ ಮೇಲೆ...

ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿ ಮಾಡಿರುವುದಕ್ಕೆ ಹೆಚ್ಚಿನ ಸುಂಕ..! ಮೋದಿಗೆ ನನ್ನ ಮೇಲೆ ಅಸಮಾಧಾನ: ಟ್ರಂಪ್

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಮತ್ತು ನನ್ನ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ. ಭಾರತವು ಅಮೆರಿಕಕ್ಕೆ ಹೆಚ್ಚಿನ ಸುಂಕ ಪಾವತಿಸಬೇಕಾಗಿರುವುದರಿಂದ ಅವರು ನನ್ನ ಮೇಲೆ ಅಷ್ಟೊಂದು ಸಂತೋಷವಾಗಿಲ್ಲ ಎಂಬುದು ನನಗೆ ಗೊತ್ತಿದೆ. ರಷ್ಯಾದಿಂದ ಅವರು ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿರುವುದಕ್ಕೆ ಈ ಸುಂಕ ವಿಧಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ರಷ್ಯಾದ ತೈಲವನ್ನು ಖರೀದಿಸುತ್ತಿರುವುದಕ್ಕೆ ಭಾರತದ ಮೇಲೆ ವಿಧಿಸಲಾದ ಹೆಚ್ಚಿನ ಸುಂಕಗಳಿಂದ ಪ್ರಧಾನಿ ಮೋದಿ ಅಸಮಾಧಾನಗೊಂಡಿದ್ದಾರೆ ಎಂದು ಪುನರುಚ್ಚರಿಸಿದ್ದು, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಸೌಹಾರ್ದಯುತವಾಗಿದ್ದರೂ ಸುಂಕದ ವಿಷಯವು ಉದ್ವಿಗ್ನತೆಯನ್ನು ಸೃಷ್ಟಿಸಿದೆ ಎಂದಿದ್ದಾರೆ.

ಇನ್ನೂ ಪ್ರಧಾನಿ ಮೋದಿ ಅವರೊಂದಿಗೆ ಇತ್ತೀಚೆಗೆ ಅಮೆರಿಕದ ರಕ್ಷಣಾ ಮಾರಾಟ ಮತ್ತು ಸುಂಕ ಕ್ರಮಗಳ ಕುರಿತು ಚರ್ಚಿಸಿರುವುದಾಗಿ ಹೇಳಿದ್ದು, ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದರಿಂದ ಉಕ್ರೇನ್ ಸಂಘರ್ಷದ ಮಧ್ಯೆ ರಷ್ಯಾ ಆರ್ಥಿಕತೆಗೆ ಬೆಂಬಲ ನೀಡಿದಂತಾಗುತ್ತದೆ. ಹೀಗಾಗಿ ಭಾರತಕ್ಕೆ ಒಟ್ಟು ಶೇ. 50ರಷ್ಟು ಸುಂಕಗಳನ್ನು ವಿಧಿಸಲಾಗಿದೆ ಎಂದಿದ್ದಾರೆ.

ಭಾರತದ ರಷ್ಯಾದ ತೈಲ ಆಮದುಗಳ ಬಗ್ಗೆ ಅಮೆರಿಕದ ಕಳವಳಗಳನ್ನು ನವದೆಹಲಿ ಪರಿಹರಿಸದಿದ್ದರೆ ವಾಷಿಂಗ್ಟನ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಇದೇ ಸಂದರ್ಭದಲ್ಲಿ ಮತ್ತೆ ಟ್ರಂಪ್ ಎಚ್ಚರಿಸಿದರು.

ಪ್ರಧಾನಿ ಮೋದಿ ತುಂಬಾ ಒಳ್ಳೆಯ ವ್ಯಕ್ತಿ. ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ತಿಳಿದಿದಿಯೇ. ನನ್ನನ್ನು ಸಂತೋಷಪಡಿಸುವುದು ಎಷ್ಟು ಮುಖ್ಯವೆಂದು ಅವರಿಗೂ ಗೊತ್ತಿದೆ ಎಂದ ಟ್ರಂಪ್, ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ಮೂಲಕ ಮಾಸ್ಕೋವನ್ನು ಬಲಪಡಿಸುತ್ತಿದೆ. ಭಾರತೀಯ ಸರಕುಗಳ ಮೇಲೆ ತೀವ್ರವಾಗಿ ಹೆಚ್ಚಿನ ಸುಂಕ ವಿಧಿಸಲು ಇದು ಮುಖ್ಯ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದೆ ಆದರೆ ಇದನ್ನು ತಿರಸ್ಕರಿಸಿರುವ ಭಾರತ, ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular