Tuesday, November 4, 2025
Google search engine

Homeಸ್ಥಳೀಯಸಾಲು ಸಾಲು ರಜೆ: ಮಂಗಳವಾರವೂ ಪ್ರವಾಸಿಗರಿಗೆ ಮೃಗಾಲಯ ವೀಕ್ಷಣೆಗೆ ಅವಕಾಶ

ಸಾಲು ಸಾಲು ರಜೆ: ಮಂಗಳವಾರವೂ ಪ್ರವಾಸಿಗರಿಗೆ ಮೃಗಾಲಯ ವೀಕ್ಷಣೆಗೆ ಅವಕಾಶ

ಮೈಸೂರು : ಸಾಮನ್ಯವಾಗಿ ಮಂಗಳವಾರ ಮೈಸೂರು ಮೃಗಾಲಯಕ್ಕೆ ರಜೆ ಇರುತ್ತದೆ. ಆದರೆ ದೀಪಾವಳಿ ಹಬ್ಬದ ವಿಶೇಷ ಮತ್ತು ಸಾಲು ಸಾಲು ರಜೆ ಪ್ರಯುಕ್ತ ಈ ಮಂಗಳವಾರ ಇದ್ದ ರಜೆಯನ್ನು ರದ್ದು ಮಾಡಿ ಪ್ರವಾಸಿಗರಿಗೆ ಮೃಗಾಲಯ ವೀಕ್ಷಣೆಗೆ ಅವಕಾಶವನ್ನು ಮಾಡಿಕೊಡಲಾಗಿತ್ತು.
ಶನಿವಾರ,ಭಾನುವಾರ, ಸೋಮವಾರ, ಬುಧವಾರ ಸರಣಿ ರಜೆ ಇದ್ದ ಹಿನ್ನೆಲೆಯಲ್ಲಿ ಸಹಜವಾಗಿ ಪ್ರವಾಸಿ ತಾಣಗಳತ್ತ ಜನರು ದಾಂಗುಡಿ ಇಡುತ್ತಾರೆ. ಹಾಗಾಗಿ ಮೈಸೂರಿನ ಪ್ರವಾಸಿ ತಾಣಗಳಲ್ಲಿ ಸಾಕಷ್ಟು ಪ್ರವಾಸಿಗರು ಕಂಡುಬಂದರು.

ಸಾಮಾನ್ಯವಾಗಿ ಮೈಸೂರಿನ ಮೃಗಾಲಯಕ್ಕೆ ಪ್ರತಿ ಮಂಗಳವಾರ ರಜೆ ಇರುತ್ತದೆ. ದೀಪಾವಳಿ ಹಬ್ಬದ ಪ್ರಯುಕ್ತ ಸರಣಿ ರಜೆ ಇರುವ ಹಿನ್ನೆಲೆಯಲ್ಲಿ ಮಂಗಳವಾರದ ರಜೆಯನ್ನು ರದ್ದು ಮಾಡಿ ಪ್ರವಾಸಿಗರ ಮೃಗಾಲಯ ಭೇಟಿಗೆ ಮೃಗಾಲಯದ ಆಡಳಿತ ಮಂಡಳಿ ಅವಕಾಶ ಮಾಡಿಕೊಟ್ಟಿತ್ತು. ಬೆಳಗ್ಗೆ 8.30 ರಿಂದ ಸಂಜೆ 5.30 ರವರೆಗೆ ಮಂಗಳವಾರ ಮೃಗಾಲಯ ತೆರೆದಿತ್ತು. ನೂರಾರು ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಂಡರು.

ಕಳೆದ ದಸರಾ ಮಹೋತ್ಸವದ ಸಂದರ್ಭದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈಗ ದೀಪಾವಳಿ ಹಬ್ಬದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಮೃಗಾಲಯ, ಮೈಸೂರು ಅರಮನೆ,ಚಾಮುಂಡಿ ಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಮೃಗಾಲಯ ಆಡಳಿತ ಮಂಡಳಿ ವತಿಯಿಂದ ಪ್ರವಾಸಿಗರು ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿ ಮಾಡುವುದನ್ನು ತಪ್ಪಿಸಲು ಇತ್ತೀಚಿಗೆ ಸ್ಥಳದಲ್ಲೇ ಕ್ಯೂ ಆರ್ ಕೋಡ್ ಮೂಲಕ ಆನ್ ಲೈನ್ ನಲ್ಲೇ ಟಿಕೆಟ್ ಖರೀದಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

RELATED ARTICLES
- Advertisment -
Google search engine

Most Popular