ಮಂಗಳೂರು (ದಕ್ಷಿಣ ಕನ್ನಡ ) ದಕ್ಷಿಣ ಭಾರತದ ನಾಗರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರ ಸಾಲು ಸಾಲಾಗಿ ಕ್ಷೇತ್ರಕ್ಕೆ ಬರುವ ಭಕ್ತರ ದಂಡೆ ಕಂಡು ಬಂತು.
ರಾಜ್ಯದಲ್ಲಿ ಜಾತಿ ಸಮೀಕ್ಷೆ ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಮುಂದುವರಿದ ಕಾರಣ ಹಾಗೂ ಎರಡನೇ ಶನಿವಾರ ನಿನ್ನೆ ಆದ್ದರಿಂದ ಇಂದು ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ದೂರ ದೂರಗಳಿಂದ ಬಂದು ಈ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನದ ಭೋಜನಕ್ಕಾಗಿ ಆದಿ ಸುಬ್ರಹ್ಮಣ್ಯದಲ್ಲಿ ಕೂಡ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಭಕ್ತರ ವಾಹನಗಳನ್ನು ಪಾರ್ಕಿಂಗ್ ಸ್ಥಳಗಳಿಲ್ಲದೆ ಎಲ್ಲೆಡೆ ಜಾಗ ಇರುವ ಸ್ಥಳಗಳಲ್ಲಿ ನಿಲ್ಲಿಸಿದ ದೃಶ್ಯ ಕಂಡು ಬಂತು. ಆದರೆ ಎಲ್ಲವೂ ಸುಗಮವಾಗಿ ವ್ಯವಸ್ಥಿತವಾಗಿ ಇರುವ ಹಾಗೆ ಶ್ರೀದೇವಳದ ಅಧಿಕಾರಿಗಳು ಹಾಗೂ ಸೆಕ್ಯೂರಿಟಿಯವರು ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದರು.
ನಿನ್ನೆಯಿಂದ ಶ್ರೀ ದೇವಳದ ಎಲ್ಲಾ ವಸತಿಗೃಹಗಳು ಭರ್ತಿಯಾಗಿ ಖಾಸಗಿ ವಸತಿಗೃಹಗಳು ಕೂಡ ಭರ್ತಿಯಾಗಿರುವುದು ಕಂಡುಬಂತು. ಆದರೂ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ಯಾವುದೇ ಕೊರತೆ ಇದ್ದು ಕಾಣಲಿಲ್ಲ.
ಕುಮಾರಧಾರ ಸ್ಥಾನಗಟ್ಟದಲ್ಲಿ ಕೂಡ ಭಕ್ತರಿಗೆ ತೀರ್ಥ ಸ್ನಾನ ಮಾಡಲು ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.