Sunday, June 29, 2025
Google search engine

Homeಅಪರಾಧಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಪರಾರಿ

ಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಪರಾರಿ

ಬೆಂಗಳೂರು: ಬೆಂಗಳೂರು ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಭಯಾನಕ ಘಟನೆ ನಡೆದಿದೆ. ದುಷ್ಕರ್ಮಿ ಮಹಿಳೆಯನ್ನು ಕೊಲೆಗೈದು, ಶವವನ್ನು ಮೂಟೆಕಟ್ಟಿ ಕಸದ ಲಾರಿಯಲ್ಲಿ ಬಿಸಾಡಿ ಪರಾರಿಯಾಗಿದ್ದಾನೆ. ಮೃತ ಮಹಿಳೆಯು 30-35 ವರ್ಷದವಳಾಗಿದ್ದು, ಅತ್ಯಾಚಾರ ನಡೆಸಿದ ಶಂಕೆಯು ವ್ಯಕ್ತವಾಗಿದೆ.

ಶನಿವಾರ ತಡರಾತ್ರಿ ಆಟೋದಲ್ಲಿ ಶವವನ್ನು ತರಲಾಗಿದ್ದು, ಸ್ಥಳೀಯರು ಕಸ ಹಾಕುವಾಗ ಶವದ ತಲೆ ಕೂದಲು ಕಾಣಿಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗುರುತು ಪತ್ತೆಗಾಗಿ ತನಿಖೆ ನಡೆಯುತ್ತಿದೆ.

ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ದುಷ್ಕರ್ಮಿಯು ಒಬ್ಬನೇ ಆಟೋದಲ್ಲಿ ಬಂದು ಶವವನ್ನು ಬಿಸಾಡಿರುವುದು ದೃಢಪಟ್ಟಿದೆ. ಪತ್ತೆಗಾಗಿ ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ತೀವ್ರಗೊಳಿಸಲಾಗಿದೆ.

RELATED ARTICLES
- Advertisment -
Google search engine

Most Popular