ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೂತನ ರಾಜ್ಯ ಸಂಚಾಲಕ ಹೊಸೂರು ಬಿ.ರಮೇಶ್ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷರಾಗಿ ದೊಡ್ಡಕೊಪ್ಪಲು ಡಿ.ವಿ. ಪ್ರವೀಣ್ ಅವರನ್ನು ನೇಮಕ ಮಾಡಲಾಯಿತು ಕೆ.ಅರ್.ನಗರ ಪ್ರವಾಸಿ ಮಂದಿರದಲ್ಲಿ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇವರನ್ನು ನೇಮಕ ಮಾಡಲಾಯಿತು.
ಉಳಿದಂತೆ ಕೆ.ಅರ್.ನಗರ ತಾಲೂಕು ಪ್ರಧಾನ ಕಾರ್ಯದರ್ಶಿ ಸಾಲೇಕೊಪ್ಪಲು ವಿವೇಕನಂದಾ , ಸಂಚಾಲಕ ಹೆಚ್.ಕೆ.ಪ್ರಕಾಶ್ , ಸಾಲಿಗ್ರಾಮ ಅಧ್ಯಕ್ಷರಾಗಿ ಹಳಿಯೂರು ಪುನೀತ್ ಗೌಡ, ಸಂಚಾಲಕರಾಗಿ ಬೇವಿನಹಳ್ಳಿ ಪ್ರಶಾಂತ್ ಅವರನ್ನು ನೇಮಕ ಮಾಡಿದರು.
ಇದರ ಜತಗೆ ಚುಂಚನಕಟ್ಟೆ ಹೋಬಳಿಯ ಉಪಾಧ್ಯಕ್ಷರಾಗಿ ಹಳಿಯೂರು ಚಂದನ್,ಕಾರ್ಯಧ್ಯಕ್ಷ ಪುನೀತ್, ಸಂಚಾಲಕ ಸಂಚಾಲಕ ಚುಂಚನಕಟ್ಟೆ ರಘು ಅವನ್ನು ನೇಮಿಸಿ ನೇಮಕಾತಿ ಪತ್ರವನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ವಾಸುದೇವ ಮೇಟಿ ಅವರು ಸಂಘದ ಸಂಘಟನೆ ಮತ್ತು ರೈತರ ಸಮಸ್ಯೆಗಳ ಕುರಿತು ಹೋರಾಟ ಮಾಡಲು ತಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು ರೈತರ ಪರ ಕೆಲಸ ಮಾಡುವ ಹೋರಾಟಗಾರರಿಗೆ ಸಂಘಟನೆಯ ಜವಾಬ್ದಾರಿಯನ್ನು ನೀಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್ ಹಿರೆಮಟ್, ಪ್ರಧಾನ ಕಾರ್ಯದರ್ಶಿ ಪುಷ್ಪಾ, ಸಂಘಟನಾ ಕಾರ್ಯದರ್ಶಿ ಬಾಳಮ್ಮ, ಜಿಲ್ಲಾಧ್ಯಕ್ಷ ಜಿ.ಲೋಕೇಶ್, ಮೈಸೂರು -ಕೊಡಗು ಜಿಲ್ಲಾ ಸಂಚಾಲಕ ಅರುಣ್, ಕೆ.ಆರ್.ನಗರ ಕ್ಷೇತ್ರದ ಅಧ್ಯಕ್ಷ ಎಚ್.ಡಿ.ಕೆ ಭಾಸ್ಕರ್ , ಹೊಸೂರು ಸೊಸೈಟಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರೈತ ಮುಖಂಡರಾದ ದೊಡ್ಡಕೊಪ್ಪಲು ಮಹೇಶ್, ಹಳಿಯೂರು ರಾಘು ಇದ್ದರು