Monday, May 26, 2025
Google search engine

Homeಅಪರಾಧಹೆಚ್ಚುವರಿ ಸಾಂಬಾರ್ ನೀಡಲಿಲ್ಲವೆಂದು ಹೋಟೆಲ್ ಸೂಪರ್ ವೈಸರ್ ಹತ್ಯೆ: ಇಬ್ಬರ ಬಂಧನ

ಹೆಚ್ಚುವರಿ ಸಾಂಬಾರ್ ನೀಡಲಿಲ್ಲವೆಂದು ಹೋಟೆಲ್ ಸೂಪರ್ ವೈಸರ್ ಹತ್ಯೆ: ಇಬ್ಬರ ಬಂಧನ

ಚೆನ್ನೈ: ಹೆಚ್ಚುವರಿ ಸಾಂಬಾರ್ ನೀಡಲಿಲ್ಲ ಎಂದು ಕೋಪಗೊಂಡ ವ್ಯಕ್ತಿ ಹೋಟೆಲ್ ನ ಸೂಪರ್ ವೈಸರ್ ನನ್ನೇ ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ (ಮಾ.12) ಚೆನ್ನೈ ಪಲ್ಲಾವರಂ ಬಳಿಯ ಪಮ್ಮಲ್ ಮುಖ್ಯ ರಸ್ತೆಯಲ್ಲಿರುವ  ರೆಸ್ಟೋರೆಂಟ್‌ ನಲ್ಲಿ ನಡೆದಿದೆ.

ಅನಗಾಪುತ್ತೂರಿನ ಪರಿಗಾರದ ಶಂಕರ್ (55) ಮತ್ತು ಅವರ ಮಗ ಅರುಣ್ ಕುಮಾರ್ (30) ಹೋಟೆಲ್ ಸೂಪರ್ ವೈಸರ್ ಅನ್ನು ಹತ್ಯೆ ಮಾಡಿರುವ ಆರೋಪಿಗಳು.

ಶಂಕರ್ ಮತ್ತು ಅವರ ಮಗ ಅರುಣ್ ಕುಮಾರ್ ಹೋಟೆಲ್ ಗೆ ಇಡ್ಲಿ ತಿನ್ನಲು ಹೋಗಿದ್ದರು. ಕೆಲ ಹೊತ್ತಿನ ಬಳಿಕ ಹೆಚ್ಚುವರಿ ಸಾಂಬಾರ್ ನೀಡುವಂತೆ ಸಿಬ್ಬಂದಿಯನ್ನು ಕೇಳಿದ್ದಾರೆ. ಈ ವೇಳೆ ಹೋಟೆಲ್​​ ಸಿಬ್ಬಂದಿ ಹೆಚ್ಚುವರಿ ಸಾಂಬಾರು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಮಾತುಕತೆ ಜಗಳ, ಹೊಡೆದಾಟವಾಗಿ ಮಾರ್ಪಟ್ಟಾಗ ಹೋಟೆಲ್ ಸೂಪರ್ ವೈಸರ್ ಸ್ಥಳಕ್ಕಾಗಮಿಸಿ ಹಲ್ಲೆ ಮಾಡುವುದನ್ನು ನಿಲ್ಲಿಸುವಂತೆ ಭದ್ರತಾ ಸಿಬ್ಬಂದಿಯನ್ನು ಕೇಳಿಕೊಂಡರೂ ಅರುಣ್ ಕುಮಾರ್ ಸೂಪರ್ ವೈಸರ್​​ಗೆ ತಲೆ, ಹಣೆ ಮತ್ತು ಕತ್ತಿನ ಮೇಲೆ ಹಲ್ಲೆ ನಡೆಸಿದ್ದಾನೆ. ಈವೇಳೆ ಪ್ರಜ್ಞಾಹೀನನಾಗಿ ಬಿದ್ದ ಸೂಪರ್ ವೈಸರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಮಾಹಿತಿ ಪಡೆದ ಶಂಕರನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಂಕರ್ ಮತ್ತು ಅರುಣ್ ಕುಮಾರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.  

RELATED ARTICLES
- Advertisment -
Google search engine

Most Popular