ಕೊಪ್ಪಳ: ಬುರ್ಖಾ ಹಾಕಿಕೊಂಡು ಬಂದ ಕಳ್ಳಿಯರು ಗೃಹಬಳಕೆಯ ಸಾಮಾಗ್ರಿಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ವಿಎ ಬಜಾರ್‌ನಲ್ಲಿ ಜೂನ್ 18ರಂದು ಘಟನೆ ನಡೆದಿದ್ದು, ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಮಹಿಳೆಯರು ಆಹಾರ ಸಾಮಾಗ್ರಿಗಳನ್ನು ತಮ್ಮ ಬಟ್ಟೆಯೊಳಗೆ ಸೇರಿಸಿಕೊಂಡು ಕಳ್ಳತನ ಮಾಡಿದ್ದಾರೆ.