Saturday, January 10, 2026
Google search engine

Homeಅಪರಾಧಹುಬ್ಬಳ್ಳಿ: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ

ಹುಬ್ಬಳ್ಳಿ: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ

ಹುಬ್ಬಳ್ಳಿ: ಸಿಐಡಿ ಕ್ರೈಂ ಬ್ರ್ಯಾಂಚ್‌ ನ ಅಧಿಕಾರಿಗಳೆಂದು ಆಗಮಿಸಿದ್ದ ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಹಳೇಹುಬ್ಬಳ್ಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹಳೇಹುಬ್ಬಳ್ಳಿ ಕೃಷ್ಣಾಪೂರ ಓಣಿಯ ಚೇತನ ಹಡಪದ, ಲಿಂಗಸೂರಿನ ಪರಶುರಾಮಗೌಡ ಪಾಟೀಲ, ಗಂಗಾವತಿ ಕಾರಟಗಿಯ ಮಧು ಎಂ. ಬಂಧಿತರಾದ ನಕಲಿ ಸಿಐಡಿ ಕ್ರೈಂ ಬ್ರ್ಯಾಂಚ್ ಪೋಲಿಸರು.

ಇವರಿಂದ ಎರಡು ಮೊಬೈಲ್ ಫೋನ್ಸ್ ಹಾಗೂ ಒಂದು ಬುಲೆಟ್ ಬೈಕ್ ವಶ ಪಡಿಸಿಕೊಂಡಿದ್ದಾರೆ.

ಬಂಧಿತರು ಇಲ್ಲಿನ ಹಳೇಹುಬ್ಬಳ್ಳಿ ಚೈತನ್ಯ ನಗರದ ಯಶೋಧಾ ಎಂಬುವರಿಗೆ ಸಿಐಡಿ ಕ್ರೈಂ ಬ್ರ್ಯಾಂಚ್ ಪೋಲಿಸರೆಂದು ಸುಳ್ಳು ಹೇಳಿಕೊಂಡು ಮೋಸ ಮಾಡಿದ್ದರು. ಅಲ್ಲದೇ ಹೆದರಿಸಿ ಹಣ ಪಡೆದುಕೊಂಡಿದ್ದರು. ಈ ಬಗ್ಗೆ ಮಹಿಳೆಯು ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು‌.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ ಪೆಕ್ಟರ್ ಸುರೇಶ ಯಳ್ಳೂರರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಮೂವರನ್ನು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular