Tuesday, August 5, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳ: ಆರನೇ ದಿನದ ಕಾರ್ಯಾಚರಣೆ ವೇಳೆ ಕಳೇಬರ ಪತ್ತೆಯಾಗಿರುವ ಶಂಕೆ

ಧರ್ಮಸ್ಥಳ: ಆರನೇ ದಿನದ ಕಾರ್ಯಾಚರಣೆ ವೇಳೆ ಕಳೇಬರ ಪತ್ತೆಯಾಗಿರುವ ಶಂಕೆ

ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ನಡೆಯುತ್ತಿರುವ ಆರನೇ ದಿನದ ಕಾರ್ಯಾಚರಣೆಯ ಸಮಯದಲ್ಲಿ ಕಳೇಬರ ಪತ್ತೆಯಾಗಿರುವ ಶಂಕೆ ಉಂಟಾಗಿದೆ. 11ನೇ ಜಾಗದಿಂದ ಸಾಕ್ಷಿಯು ಎಸ್‌ಐಟಿ ತಂಡವನ್ನು ಕಾಡಿನೊಳಕ್ಕೆ ಕರೆದೊಯ್ದಿದ್ದನು.

ಬೆಳಗ್ಗೆ 11.30ಕ್ಕೆ ಅರಣ್ಯ ಪ್ರವೇಶಿಸಿದ ತಂಡ ನಾಲ್ಕು ಗಂಟೆಗಳವರೆಗೂ ಹೊರಬರದೆ ಶೋಧೆಯಲ್ಲಿ ತೊಡಗಿತ್ತು. ನದಿತೀರದ ಸ್ನಾನಘಟ್ಟದಲ್ಲಿ ಮೃತದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಶೋಧದ ಸ್ಥಳಕ್ಕೆ ಎರಡು ಮೂಟೆ ಉಪ್ಪನ್ನು ತರಲಾಗಿದೆ. ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡದೆ ಮೌನದಲ್ಲಿದ್ದಾರೆ. ಹಿಂದಿನ ಗುರುತಿಸಲಾದ ಸ್ಥಳ ಬಿಟ್ಟು ಹೊಸ ಸ್ಥಳದಲ್ಲಿ ಶೋಧ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular