Monday, August 25, 2025
Google search engine

Homeರಾಜ್ಯಧರ್ಮಸ್ಥಳ ಚಲೋ ಹೋರಾಟಕ್ಕೆ ಭಾರಿ ಬೆಂಬಲ

ಧರ್ಮಸ್ಥಳ ಚಲೋ ಹೋರಾಟಕ್ಕೆ ಭಾರಿ ಬೆಂಬಲ

ಬೆಂಗಳೂರು : ಧರ್ಮಸ್ಥಳದ ವಿರುದ್ಧ ನಡೆದಿರೋ ಷಡ್ಯಂತ್ರ ಒಂದೊಂದೇ ಬಟಾಬಯಲಾಗುತ್ತಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಈ ನಡುವೆ ಧರ್ಮಸ್ಥಳ ಚಲೋ ಮುಂದುವರಿದಿದೆ.

ಧರ್ಮ ರಕ್ಷಣೆಗೆ ಹಿಂದೂ ಪರ ಹೋರಾಟಗಾರರು ಮುಂದಾಗಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪಿಸಿ ಬಿಜೆಪಿಯೂ ಸಹ ಧರ್ಮಸ್ಥಳ ಚಲೋ ಮುಂದುವರಿಸಿದೆ. ಸಾವಿರಾರು ಜನರು ಶ್ರೀ ಕ್ಷೇತ್ರಕ್ಕೆ ತೆರಳಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ.

ಸೋಮವಾರವಾದ ಇಂದು ಬೆಂಗಳೂರಿನ ಜಯನಗರ, ಬಸವನಗುಡಿ, ಬಿಟಿಎಂ, ವಿಜಯನಗರ ಸೇರಿದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಾರ್ಯಕರ್ತರಿಂದ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಳ್ಳಲಾಗಿದೆ.

ಜಯನಗರ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಂದ ನೇರವಾಗಿ ನೈಸ್ ರಸ್ತೆಯ ಮೂಲಕ ಬಿಜೆಪಿ ಕಾರ್ಯಕರ್ತರು ಹಾಗೂ ಆಸ್ತಿಕರು ಧರ್ಮಸ್ಥಳಕ್ಕೆ ತೆರಳಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಇತರೆ ಮುಖಂಡರ ನೇತೃತ್ವದಲ್ಲಿ ಸುಮಾರು 400 ಕಾರುಗಳಲ್ಲಿ ಧರ್ಮಸ್ಥಳ ಯಾತ್ರೆ ಕೈಗೊಂಡಿದ್ದು, ಧರ್ಮಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲೇ ಕಾರುಗಳನ್ನು ಸ್ಟಾಪ್ ಮಾಡಿ ಅಲ್ಲಿಂದ ಪಾದಯಾತ್ರೆಯೊಂದಿಗೆ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯಲಿದ್ದಾರೆ.

ನೈಸ್ ರೋಡ್ ಟೋಲ್‌ನಿಂದ ಬಿಜೆಪಿ ಧರ್ಮಸ್ಥಳ ಯಾತ್ರೆ ಆರಂಭಗೊಂಡಿದೆ. ಐದು ವಿಧಾನಸಭಾ ಕ್ಷೇತ್ರದಿಂದ ಯಾತ್ರೆ ಕೈಗೊಂಡಿದ್ದಾರೆ, ಶಾಸಕ ರವಿ ಸುಬ್ರಮಣ್ಯರಿಂದ ಯಾತ್ರೆಗೆ ಚಾಲನೆ ಸಿಕ್ಕಿದ್ದು, ಮಂಜುನಾಥನ ಪರ ಜೈಕಾರ ಮೊಳಗಿದೆ.

ಇನ್ನು ಇದೇ ಸಂದರ್ಭದಲ್ಲಿ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಮಾತಾಡಿದ ಸಂಸದ ತೇಜಸ್ವಿ ಸೂರ್ಯ, ನಾವೆಲ್ಲರೂ ಧರ್ಮಸ್ಥಳಕ್ಕೆ ತೆರಳುತ್ತಿದ್ದೇವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಲಾಗಿದ್ದು, ಕೇರಳ, ದುಬೈಗಳಲ್ಲಿ ಕೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನ ಸಹಿಸೋಕೆ ಆಗಲ್ಲ. ಈಗ ಸಿಕ್ಕಿಬಿದ್ದಿರುವವರು ಪಾತ್ರಧಾರಿಗಳು ಮಾತ್ರ. ಸೂತ್ರಧಾರಿಗಳು ಬಹಳ ಮಂದಿ ಇದ್ದಾರೆ. ಶಬರಿಮಲೆ ಅಯ್ಯಪ್ಪ, ತಿರುಪತಿ ಆಯ್ತು ಈಗ ಧರ್ಮಸ್ಥಳದ ಸರದಿಯಾಗಿದೆ. ಇದು ಒಪ್ಪುವಂತಹದ್ದಲ್ಲ. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಮುಂದೆ ಧರ್ಮಸ್ಥಳದಲ್ಲೇ ದೊಡ್ಡ ಧರ್ಮ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು. ಈ ಷಡ್ಯಂತ್ರ ವಿರುದ್ಧ ಎನ್‌ಐಎ ತನಿಖೆ ಆಗಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular