ಹುಣಸೂರು: ಅಂತರಾಷ್ಟ್ರೀಯ ರೋಟರಿ ಸೇವೆ ಉಳಿದೆಲ್ಲಾ ಕಾರ್ಯಗಳಿಗಿಂತ ಶ್ರೇಷ್ಠವಾಗಿದ್ದು ಮನು ಕುಲದ ಬಹು ದೊಡ್ಡ ಧ್ಯೇಯವಾಗಿದೆ ಎಂದು ಪದಗ್ರಹಣಾಧಿಕಾರಿ ಮೇಜರ್ ಡೋನರ್ ಡಾ.ಪ್ರಶಾಂತ್ ತಿಳಿಸಿದರು.
ನಗರದ ರೋಟರಿ ಕ್ಲಬ್ ನ 2025-2026 ರ ಪದಗ್ರಹಣ ಕಾರ್ಯಕ್ರಮದಲ್ಲಿ ಒಂದು ವರ್ಷದ ಅಧಿಕಾರ ಹಸ್ತಾಂರಿಸಿ ಮಾತನಾಡಿದ ಅವರು, ರೋಟರಿ ಪ್ರತಿವರ್ಷವು ವಿಶ್ವದೆಲ್ಲಡೆ ಅರಿವಿಗೆ ಬರುವ ಕಡು ಬಡವರನ್ನು ಗುರುತಿಸಿ ಸಹಾಯ ಹಸ್ತವನ್ನು ಚಾಚಿ ಅವರ ಏಳಿಗೆಗೆ ಶ್ರಮಿಸಿ ನಿಸ್ವಾರ್ಥ ಸೇವೆಗೆ ಮುಂದಾಗುವ ಸಂಸ್ಥೆ ಇದ್ದರೆ ಅದು ರೋಟರಿ ಕ್ಲಬ್ ಮಾತ್ರವೆಂದರು.

ಸೇವೆ ಮಾಡಲೆಂದು ಕಟಿಬದ್ದವಾಗಿ ನಿಂತಿರುವ ಈ ರೋಟರಿ ಸಂಸ್ಥೆ ಸರಕಾರಿ ಶಾಲೆಗಳ ದತ್ತು ಸ್ವೀಕಾರ, ಅಂಗನವಾಡಿ ಅಭಿವೃದ್ಧಿ, ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವ ಬಡ ರೋಗಿಗಳ ರಕ್ಷಣೆ, ಸಂಧ್ಯಾಸುರಕ್ಷ ಹೀಗೆ ಸಮಾಜದ ಅನ್ಯೂನ್ಯತೆಗೆ ಒಳಗಾದವರ ಬದುಕಿಗೆಬೆಳಕಾಗಬೇಕು ಎಂಬ ಕಾರಣದಿಂದ ಹತ್ತು ಜಿಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಹಾಯಕ ಗೌರ್ನರ್ ತಿರುಮಲಾಪುರ ರಾಜೇಗೌಡ ಮಾತನಾಡಿ, ಹುಣಸೂರು ರೋಟರಿ ಕ್ಲಬ್ 58 ವಸಂತಗಳನ್ನು ಪೂರೈಸಿ ತಾಲೂಕಿನಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ 2024-2025 ರ ಅವಧಿಯಲ್ಲಿ ಡೈಮಂಡ್ ಪ್ಲಸ್ ಅವಾರ್ಡ್ ಪಡೆದು ರೋಟರಿ ಸಂಸ್ಥೆಗೆ ಕೀರ್ತಿತಂದಿದ್ದಾರೆ ಎಂದು ಸ್ಮರಿಸಿದರು.
ವಲಯ ಸೇನಾನಿ ಕೆ.ರಮೇಶ್ ಮಾತನಾಡಿ, ರೋಟರಿ ಸೇವೆ ಅಮೂಲ್ಯವಾಗಿದ್ದು. ಇಲ್ಲಿ ಒಗ್ಗೂಡಿ ಕೆಲಸ ಮಾಡಿ ದೇಶಾದ್ಯಂತ ಪೋಲಿಯೊ ನಿರ್ಮೂಲನೆ ಮಾಡಿದಂತೆ ಬಡತನ ಹೋಗಲಾಡಿಸಲು ಸಾಧ್ಯವಿದೆ ಎಂದರು.
ಹುಣಸೂರು ರೋಟರಿ ಕ್ಲಬಿಗೆ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ, ಹೆಚ್ .ಆರ್.ಕೃಷ್ಣಕುಮಾರ್ ರೋಟರಿ ಸೇವೆ ಗ್ರಾಮಾಂತರ ಭಾಗದ ಮಹಿಳೆಯರಿಗೆ ಹೊಲಿಗೆ ಯಂತ್ರನೀಡಲಾಗಿದೆ.
ತಾಲೂಕಿನ ಟಾಪರ್ ಎಸ್.ಎಸ್.ಎಲ್.ಸಿ. ಮಕ್ಕಳಾದ ರೋಟರಿ ವಿದ್ಯಾಸಂಸ್ಥೆಯ ಕ್ಷಣ ಆರ್. ಟ್ಯಾಲೆಂಟ್ ಶಾಲೆಯ ರಚನ, ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೆ ಸ್ಥಾನದ ಪಡೆದ ತಾಲೂಕಿನ ಶ್ರೇಯಶ್, ಹುಣಸೂರು ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯ ಡಾ. ಸತೀಶ್ ಹಾಗೂ ಡಾ. ಮೈನಾ ಅವರನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ., ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ, ರೊ. ಧರ್ಮಾಪುರ ನಾರಾಯಣ್, ರೋ ರಾಜಶೇಖರ್, ಆನಂದ್ ಆರ್. ಡಾ.ವೃಷಬೇಂದ್ರಸ್ವಾಮಿ, ಡಾ.ರವಿಕುಮಾರ್, ಡಾ.ರಘು, ತಂಗಮರಿಯಪ್ಪನ್, ಜಿ.ವಿ. ಶ್ರೀ ನಾಥ್, ಡಾ.ಬಸವರಾಜು, ಕ ಪಾಂಡು ಕುಮಾರ್ ಪಿ. ಲೂಯಿಸ್ ಪೆರೇರಾ, ಗಿರೀಶ್ , ರವೀಶ್, ನೂತನ ಸದಸ್ಯರಾದ ವೀರಭದ್ರಪ್ಪ, ಚೆಂದ್ರೇಗೌಡ, ಕಿರಂಗೂರ್ ಬಸವರಾಜ್, ವಕೀಲ ಲಕ್ಷ್ಮಕಾತ್. ಹಾಗೂ ರೈತ ಸಂಘದ ಹೊಸೂರು ಕುಮಾರ್, ಸತ್ಯಪ್ಪ, ಕುಮಾರ್ ಅರಸೇಗೌಡ, ಇದ್ದರು.