Wednesday, July 30, 2025
Google search engine

Homeರಾಜ್ಯಸುದ್ದಿಜಾಲಹುಣಸೂರು ರೋಟರಿ ಕ್ಲಬ್‌ನಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಮತ್ತು ಚೇರುಗಳ ಕೊಡುಗೆ

ಹುಣಸೂರು ರೋಟರಿ ಕ್ಲಬ್‌ನಿಂದ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಮತ್ತು ಚೇರುಗಳ ಕೊಡುಗೆ

ಹುಣಸೂರು: ನಗರದ ನರಸಿಂಹಸ್ವಾಮಿ ತಿಟ್ಟಿನ ಅಂಗನವಾಡಿ ಕೇಂದ್ರಕ್ಕೆ ಹುಣಸೂರು ರೋಟರಿ ಕ್ಲಬ್ ವತಿಯಿಂದ ಸಮವಸ್ತ್ರ ಮತ್ತು ಚೇರುಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕಲಿಕೆಯಲ್ಲಿರುವ ತಾಲೂಕಿನ ಅತೀ ಹೆಚ್ಚು 40 ಮಕ್ಕಳಿರುವ ಅಂಗನವಾಡಿ ಇದಾಗಿದ್ದು, ಎಲ್ಲಾ ಮಕ್ಕಳಿಗೂ ಸಮವಸ್ತ್ರ ಹಾಗೂ ಕುಳಿತುಕೊಳ್ಳಲು ಚೇರುಗಳು ಮತ್ತು ಎಲ್ಲಾ ಮಕ್ಕಳಿಗೂ ವಾಲಿ ಬಾಲ್ ಮತ್ತು ಸಿಹಿ ನೀಡಿ ಮಾತನಾಡಿದ, ಸಹಾಯಕ ಗವರ್ನರ್ ತಿರುಮಲಾಪುರ ರಾಜೇಗೌಡ, ಇದು ಅಂತರಾಷ್ಟ್ರೀಯ ರೋಟರಿಯ ಜಿಲ್ಲಾ ಯೋಜನೆಯಾಗಿದ್ದು ಇದರಿಂದ. ಸರಕಾರದ ಮೂಲ ಶಿಕ್ಷಣ ಕಲಿಕಾ ಯೋಜನೆಗೆ ಒತ್ತು ನೀಡಲು ಸಹಕಾರಿಯಾಗಿದೆ ಎಂದರು.

ರೋಟರಿ 25-26 ರ ಪ್ರಸ್ತುತ ಯೋಜನೆಯಲ್ಲಿ ಗ್ರಾಮಾಂತರ ಭಾಗದ ಹಲವು ಭಾಗಗಳಲ್ಲಿ ಸರಕಾರಿ ಶಾಲೆಗೆ ಮಕ್ಕಳು ಬಾರದ ಸ್ಥಿತಿ ನಿರ್ಮಾಣವಾಗಿದ್ದು ಮಕ್ಕಳು ಮತ್ತೆ ಸರಕಾರಿ ಕನ್ನಡ ಶಾಲೆಗೆ ಬರಬೇಕು ಎಂಬ ಸದ್ಭಾವನೆಯಿಂದ. ಈಗಾಗಲೇ ಮಕ್ಕಳ ಕುಡಿಯುವ ನೀರು ಇನ್ನಿತರೆ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿದ್ದು, ತಾಲೂಕಿನ ಒಂದು ಸರಕಾರಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಲಿದ್ದೇವೆ ಎಂದರು.

ಸಿಡಿಪಿಓ ಹರೀಶ್ ಮಾತನಾಡಿ ಅಂತರಾಷ್ಟ್ರೀಯ ರೋಟರಿ ಕ್ಲಬ್ ಪ್ರತಿವರ್ಷವೂ ಅಂಗನವಾಡಿ ಮತ್ತು ಸರಕಾರಿ ಶಾಲೆಯ ಉನ್ನತಿಗೆ ತಮ್ಮ ಯೋಜನೆಯಲ್ಲಿ ಮಕ್ಕಳ ಮೂಲ ಸೌಕರ್ಯಗಳನ್ನು ನೆರವೇರಿಸಯವ ಮೂಲಕ ರೋಟರಿ ಸೇವೆ ಅನನ್ಯವಾಗಿದೆ ಎಂದರು.

ರೋಟರಿಯ ಹಿರಿಯ ಸದಸ್ಯ ರಾಜಶೇಖರ್ ಸೇವೆನ್ನೆ ಮೂಲವಾಗಿಟ್ಟುಕೊಂಡಿದ್ದು. ನಮ್ಮ ಮೊದಲ ಆಯ್ಕೆ ಸಮಾಜದ ಇಲ್ಲದವರ ಬದುಕಿಗೆ ನೆರವಾಗುವುದು. ಆದ್ದರಿಂದಲೇ ಇಂದು ವಿಶ್ವಮಟ್ಟದಲ್ಲಿ ಪೋಲಿಯೋ ಅಂತ ಮಾರಕ ರೋಗನ್ನು ನಾಶ ಮಾಡಲು ರೋಟರಿ ಪರಿಣಾಮಕಾರಿಯಾಗಿ ಕೆಲಸಮಾಡಿದೆ ಎಂದರು.

ಹುಣಸೂರು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್, ಮಾತನಾಡಿ, ನಗರದ ಈ ಅಂಗನವಾಡಿ ಕೇಂದ್ರದ ಶಿಕ್ಷಕಿಗೆ ಎರಡು ಬಾರಿ ಉತ್ತಮ ಪ್ರಶಸ್ತಿ ಮಡೆದಿದ್ದಾರೆ. ಎಂಬ ಕಾರಣಕ್ಕೆ ಒಂದು ನಾವು ಬೇಟಿ ನೀಡಿದಾಗ. ಇಲ್ಲಿಯ ವಾತಾವರಣ ಮನಸ್ಸಿಗೆ ಮುದನೀಡಿತು. ಆದ್ದರಿಂದ 25 ಮಕ್ಕಳಿಗೂ ಸಮವಸ್ತ್ರ ಮತ್ತು 40. ಮಕ್ಕಳಿಗೂ ಆಸನ ವ್ಯವಸ್ಥೆಗೆ ಉತ್ತಮ ದರ್ಜೆಯ ಚೇರುಗಳನ್ನು ರೋಟರಿವತಿಯಿಂದ ನೀಡಲಾಯಿತು.

ಅಳಿಲು ಸೇವೆಗೆ ರೋಟರಿ ಸದಸ್ಯ ಹಾಗೂ ಕಮಲ್ ದೀಪ್ ಮಾಲಿಕ ರವೀಶ್ ಅವರು ನಮ್ಮ ಕೋರಿಕೆಗೆ ಅಷ್ಟು ಮಕ್ಕಳಿಗೂ ಸಮವಸ್ತ್ರ ನೀಡಿ ಮಾನವೀಯತೆ ಮೆರೆದರೆ. ಮತ್ತೊಬ್ಬ ರೋಟರಿ ಸದಸ್ಯರಾದ ಡಾ.ರವಿಕುಮಾರ್ ಅವರು ಅಷ್ಟೂ ಮಕ್ಕಳಿಗೂ ಗುಣಮಟ್ಟದ ಚೇರುಗಳನ್ನು ನೀಡುವ ಮೂಲಕ ರೋಟರಿ ಸಮಾಜ ಸೇವೆಗೆ ಸೇತುವೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ರೋಟರಿ ಹಿರಿಯ ಸದಸ್ಯರಾದ ರಾಜಶೇಖರ್, ರವೀಶ್ ಗುಪ್ತ, ಅಂನಗವಾಡಿ ಶಿಕ್ಷಕಿ ಸರಸ್ವತಿ, ಶಾಲೆಯ ಮುಖ್ಯ ಶಿಕ್ಷಕ ಶ್ರೀ ಕಂಠಸ್ವಾಮಿ, ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ ಇದ್ದರು.

RELATED ARTICLES
- Advertisment -
Google search engine

Most Popular