‘ಬಿಗ್ ಬಾಸ್’ ಖ್ಯಾತಿಯ ರಾಕೇಶ್ ಅಡಿಗ ನಟನೆಯ ‘ನಾನು ಮತ್ತು ಗುಂಡ 2’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ನಾನು ಮತ್ತು ಗುಂಡ ಸಿನಿಮಾದ ಸೀಕ್ವೆಲ್ ಇದಾಗಿದ್ದು, ಸದ್ಯ ಟೀಸರ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಶ್ವಾನ ಜೊತೆಗಿನ ರಾಕೇಶ್ ಅಡಿಗ ಅವರ ಪಯಣ ಹಾಗೂ ಮೊದಲ ಭಾಗದ ತುಣುಕಿನೊಂದಿಗೆ ಟೀಸರ್‌ನಲ್ಲಿ ಝಲಕ್ ತೋರಿಸಲಾಗಿದೆ. ಟೀಸರ್ ನೋಡಿರುವ ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ.
ರಾಕೇಶ್ ಅಡಿಗಗೆ ನಾಯಕಿಯಾಗಿ ’ಲವ್ ಮಾಕ್ಟೈಲ್’ ನಟಿ ರಚನಾ ಇಂದರ್ ನಟಿಸಿದ್ದಾರೆ. ಈ ಚಿತ್ರವನ್ನು ರಘು ಹಾಸನ್ ನಿರ್ದೇಶನ ಮಾಡಿದ್ದಾರೆ. ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಸದ್ಯದಲ್ಲೇ ರಿಲೀಸ್ ಬಗ್ಗೆ ತಂಡ ಮಾಹಿತಿ ನೀಡಲಿದೆ.
2020ರಲ್ಲಿ ತೆರೆಕಂಡ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್, ಶಿವರಾಜ್ ಕೆ.ಆರ್ ಪೇಟೆ, ಪ್ರಕಾಶ್ ಬೆಳವಾಡಿ ನಟಿಸಿದ್ದರು.