Tuesday, May 20, 2025
Google search engine

Homeಸಿನಿಮಾರೇಣುಕಾಸ್ವಾಮಿಯಿಂದ ನನಗೆ ಯಾವುದೇ ಮೆಸೇಜ್ ಬಂದಿಲ್ಲ : ನಟಿ ಶುಭಾ ಪೂಂಜಾ ಸ್ಪಷ್ಟನೆ

ರೇಣುಕಾಸ್ವಾಮಿಯಿಂದ ನನಗೆ ಯಾವುದೇ ಮೆಸೇಜ್ ಬಂದಿಲ್ಲ : ನಟಿ ಶುಭಾ ಪೂಂಜಾ ಸ್ಪಷ್ಟನೆ

ಬೆಂಗಳೂರು : ರೇಣುಕಾಸ್ವಾಮಿ ನನಗೆ ಯಾವುದೇ ಮೆಸೇಜ್ ಮಾಡಿಲ್ಲ ಎಂದು ನಟಿ ಶುಭ ಪೂಂಜಾ ಇನ್ ಸ್ಟಾಗ್ರಾಂ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕಾಗಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಪೋಲೀಸರು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ಇದೀಗ ಚಾರ್ಟ್ ಶೀಟ್ ನಲ್ಲಿ ಕೊಲೆಯಾದ ರೇಣುಕಾ ಸ್ವಾಮಿ ಕೇವಲ ಪವಿತ್ರಾಗೌಡ ಅಷ್ಟೇ ಅಲ್ಲದೆ ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸೇರಿದಂತೆ ಹಲವು ನಟಿಯರಿಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎನ್ನಲಾಗಿತ್ತು. ಇದಕ್ಕೆ ನಟಿ ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ.

ರೇಣುಕಾಸ್ವಾಮಿ ಅವರ ಸಂದೇಶಗಳ ವಿಷಯಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆಯಿಂದ ನನಗೆ ಕರೆ ಮಾಡಿದ ನನ್ನ ಎಲ್ಲಾ ಆತ್ಮೀಯ ಮಾಧ್ಯಮ ಸ್ನೇಹಿತರಿಗೆ.. ಸ್ಪಷ್ಟಪಡಿಸಲು ಬಯಸುತ್ತೇನೆ .. ನನ್ನ ವೈಯಕ್ತಿಕ ಖಾತೆಯಲ್ಲಿ ನನಗೆ ಯಾವುದೇ ಸಂದೇಶಗಳು ಬಂದಿಲ್ಲ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular