Wednesday, June 10, 2026
Google search engine

Homeರಾಜ್ಯ21 ವರ್ಷದೊಳಗಿನವರಿಗೆ ಬಾರ್‌-ಪಬ್‌ಗಳಲ್ಲಿ ಐಡಿ ಕಡ್ಡಾಯ : ಗೃಹಸಚಿವ ಪ್ರಿಯಾಂಕ ಖರ್ಗೆ

21 ವರ್ಷದೊಳಗಿನವರಿಗೆ ಬಾರ್‌-ಪಬ್‌ಗಳಲ್ಲಿ ಐಡಿ ಕಡ್ಡಾಯ : ಗೃಹಸಚಿವ ಪ್ರಿಯಾಂಕ ಖರ್ಗೆ

ಬೆಂಗಳೂರು : ಬಾರ್‌ ಮತ್ತು ಪಬ್‌ಗಳಿಗೆ ವಿದ್ಯಾರ್ಥಿಗಳು ಹೋಗುತ್ತಾರೆ ಎಂಬ ಹಿನ್ನೆಲೆಯಲ್ಲಿ ಗುರುತಿನ ಚೀಟಿಯನ್ನು ಕಡ್ಡಾಯ ಮಾಡಲಾಗಿದೆ ಎಂದು ಗೃಹಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಷಕರಿಂದ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ 21 ವರ್ಷದೊಳಗಿನವರಿಗೆ ಗುರುತಿನ ಚೀಟಿಯನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದು ಯುವಕರ ಭವಿಷ್ಯದ ಪ್ರಶ್ನೆಯಾಗಿದೆ. ಅವರನ್ನು ನಿಯಂತ್ರಣ ಮಾಡದಿದ್ದರೆ ಹಾದಿ ತಪ್ಪಬಹುದು. ಇದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು, ಬಿಟ್‌ಕಾಯಿನ್‌ ವಿಚಾರದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ನಾವು ಪಾರದರ್ಶಕವಾಗಿ ತನಿಖೆ ಮಾಡಿದ್ದೇವೆ. ತಪ್ಪು ಮಾಡಿದವರನ್ನು ಯಾರೂ ಕೂಡಾ ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದರು.

ಐಟಿ, ಸಿಬಿಐ ಯಾರ ಗೊಂಬೆ ಎಂದು ಪ್ರಶ್ನಿಸಿದ ಅವರು, ಕೆಲವರ ವಿರುದ್ಧ ಮಾತ್ರ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಆರ್‌ಎಸ್‌‍ಎಸ್‌‍ನವರು ಏಕೆ ನೋಂದಣಿ ಮಾಡಿಕೊಳ್ಳಲು ಭಯ ಪಡುತ್ತಿದ್ದಾರೆ. ಯಾವುದೇ ಸರ್ಕಾರಿ ಸಂಸ್ಥೆಗೆ ಉತ್ತರ ಕೊಡುವಂತಿಲ್ಲ ಎಂದು ಬಿಜೆಪಿಯವರು ಹೇಳಲಿ. ನಮಗೆ ಯಾವುದೇ ಸಂವಿಧಾನ, ಯಾವುದೇ ಕಾನೂನು ಅನ್ವಯವಾಗುವುದಿಲ್ಲ ಎಂದು ಹೇಳಿದರು.

ಇಲ್ಲವೆಂದರೆ ಅವರೇ ತಿದ್ದಿಕೊಳ್ಳಲಿ. ಬೀದಿಬದಿ ವ್ಯಾಪಾರಿಗಳು ಕೂಡಾ ನೋಂದಣಿ ಮಾಡಿಕೊಳ್ಳುತ್ತಾರೆ. ದೇವಸ್ಥಾನದ ದೇಣಿಗೆಯ ಲೆಕ್ಕವನ್ನೂ ಕೊಡಲಾಗುತ್ತದೆ. ಆರ್‌ಎಸ್‌‍ಎಸ್‌‍ನವರು ಆದಾಯ ತೆರಿಗೆ ಇಲಾಖೆಗೆ ಲೆಕ್ಕ ಕೊಡಬಾರದೇ? ಎಂದು ಪ್ರಶ್ನಿಸಿದರು.ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿಯವರು ಅವರಿಗೆ ಆರ್‌ಎಸ್‌‍ಎಸ್‌‍ನವರ ಇತಿಹಾಸ ಗೊತ್ತಿಲ್ಲ ಎನ್ನಿಸುತ್ತದೆ ಎಂದು ತಿರುಗೇಟು ಕೊಟ್ಟರು.

RELATED ARTICLES
- Advertisment -
Google search engine

Most Popular