ಮೈಸೂರು: ಅಪಘಾತ ಸಂಭವಿಸಲು ಇರುವ ಕಾರಣಗಳನ್ನು ಗುರುತಿಸಿ ಅಪಘಾತ ಪ್ರಕರಣಗಳು ಕಡಿಮೆ ಆಗುವ ಸಾವು ನೋವುಗಳು ಸಂಭವಿಸಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳು ಸೂಚಿಸಿದರು. ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ರಸ್ತೆ ಮಟ್ಟದ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಹಾಕುವುದು, ಅಜಾಗರೂಕತೆಯಿಂದ ವಾಹನ ಚಲಾಯಿಸುವುದು, ವಾಹನ ಚಲಾಯಿಸುವುದು, ಚಾಲಕರ ನಿರ್ಲಕ್ಷ್ಯ, ರಸ್ತೆಗಳ ದುರಸ್ತಿ ಅಥವಾ ಸರಿಯಾಗಿ ರಸ್ತೆ ಸಂಚಾರ ನಿಯಮ ಪಾಲಿಸುವುದು ಅಪಘಾತಗಳಿಗೆ ಕಾರಣವಾಗಿದೆ. ಈ ರೀತಿಯ ನಿಯಮಗಳ ಉಲ್ಲಂಘನೆಗಳನ್ನು ವಾಹನ ಚಾಲಕರು ಮಾಡಬಾರದು ಎಂದು ಹೇಳಿದರು. ನಗರದ ದೊಡ್ಡ ಆಲದ ಮರ, ವರಕೂಡು ಗೇಟ್, ಮೈಸೂರು ಹುಣಸೂರು ರಸ್ತೆ ಹಿನಕಲ್ ಜಂಕ್ಷನ್, ಬಂಡಿಪಾಳ್ಯ, ನಂಜನಗೂಡು ಎಪಿಎಂಸಿ ಹಾಗೂ ನಗರದ ಜೆಎಲ್‌ಬಿ ರಸ್ತೆ ಜಂಕ್ಷನ್‌ಗಳಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದ ಮೇ ತಿಂಗಳಿನವರೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇವುಗಳನ್ನು ಬ್ಲೂ ಸ್ಪಾಟ್‌ಕ್ ಎಂದು ಗುರುತಿಸಲಾಗಿದೆ. ಹೆಚ್ಚು ಅಪಘಾತ ಆಗುತ್ತಿರುವ ವಲಯಗಳನ್ನು ಗುರುತಿಸಿ ಎಚ್ಚರಿಕೆ ಬೋರ್ಡ್‌ಗಳನ್ನು ಹಾಕಬೇಕು. ಈ ಬ್ಲಾಕ್ ಸ್ಪಾಟ್‌ಗಳಲ್ಲಿ ಚಾಲಕರು ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಎಂದು ಹೇಳಿದರು. ದೊಡ್ಡ ವಾಹನಗಳನ್ನು ಓಡಿಸುವವರು ಸಣ್ಣ ವಾಹನಗಳಿಗೆ ಚಲಿಸಲು ಅವಕಾಶ ಮಾಡಿಕೊಡಬೇಕು. ಮೆಟ್ರೋಪೋಲ್ ಸಿಗ್ನಲ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಿ ಸ್ವಲ್ಪ ಮುಂದೆ ಬಸ್‌ಗಳನ್ನು ನಿಲ್ಲಿಸಬೇಕು. ಈ ಸಂಬಂಧ ಒಬ್ಬ ಸಿಬ್ಬಂದಿ ನೇಮಿಸಿ ಕ್ರಮ ವಹಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮೈಸೂರು ನಗರ ಸಂಚಾರಿ ವಿಭಾಗದ ಡಿಸಿಪಿ ಜಾಹ್ನವಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು. ಕೋಟ್ ಮೈಸೂರು ಜಿಲ್ಲಾ ಮೇ ತಿಂಗಳ 39 ಅಪಘಾತಗಳು ಸಂಭವಿಸಿದ್ದು 43 ಜನ ಮರಣ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕರು ರ್ಯಾಶ್ ಡ್ರೈವ್ ಮಾಡುತ್ತಿದ್ದಾರೆ, ಕಳೆದ ತಿಂಗಳಿನಲ್ಲಿ ಕೆಆರ್‌ಟಿಸಿ ಬಸ್‌ಗಳಿಂದ 10 ಅಪಘಾತಗಳು ಸಂಭವಿಸಿದ್ದು 7 ಮಾರಣಾಂತಿಕ ಅಪಘಾತಗಳು ಮತ್ತು 8 ಸಾವುಗಳು ಸಂಭವಿಸಿವೆ. ಹೀಗಾಗಿ ಅವರಿಗೆ ಸೂಕ್ತ ತರಬೇತಿ ಕೌನ್ಸಲಿಂಗ್ ಹಾಗೂ ಅರಿವು ಕಾರ್ಯಕ್ರಮ ನೀಡಿ. -ಸೀಮಾ ಲಾಟ್ಕರ್, ಎಸ್‌ಪಿ