Tuesday, May 20, 2025
Google search engine

Homeರಾಜ್ಯಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ನನ್ನಷ್ಟು ಖುಷಿಪಡುವವರು ಯಾರೂಇಲ್ಲ : ಸಚಿವ ವಿ.ಸೋಮಣ್ಣ

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ನನ್ನಷ್ಟು ಖುಷಿಪಡುವವರು ಯಾರೂಇಲ್ಲ : ಸಚಿವ ವಿ.ಸೋಮಣ್ಣ

ತುಮಕೂರು: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದರೆ ನನ್ನಷ್ಟು ಖುಷಿ ಪಡುವವರು ಯಾರೂ ಇಲ್ಲ” ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯನವರು ನುರಿತ ರಾಜಕಾರಣಿಯಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿನ ಕೆಲಸ ಕಾನೂನು ಮಾಡುತ್ತೆ. ಅದಕ್ಕೆ ಸಿದ್ದರಾಮಯ್ಯ ಸಾಹೇಬರು ಸಹ ಅವರೇನು ಮಾಡಬೇಕೋ ಮಾಡುತ್ತಾರೆ. ಒಂದು ಸತ್ಯವೆಂದರೆ ಕಾನೂನಿಗಿಂತ ನಾವ್ಯಾರು ದೊಡ್ಡವರಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ. ಅದು ಯಾರ್ಯಾರಿಗೆ ಯಾವುದು ಅನ್ನುವುದಕ್ಕಿಂತ ಹೆಚ್ಚಾಗಿ, ಕಾನೂನು ತನ್ನ ಕೆಲಸವನ್ನು ತಾನು ಮಾಡುತ್ತದೆ” ಎಂದರು.

“ನನಗೂ 45 ವರ್ಷಗಳ ರಾಜಕೀಯ ಅನುಭವ ಇದೆ. ಸಿದ್ದರಾಮಯ್ಯ ಅವರು ಬುದ್ಧಿವಂತರಿದ್ದಾರೆ. ನಾನು ಅವರು ಬಹಳ ಆತ್ಮೀಯರಾಗಿ ಕೆಲಸ ಮಾಡಿದ್ದೇವೆ. ನಿನ್ನೆ ಕೂಡ ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದನ್ನು ನಾನು ಬಹಳ ಆನಂದದಿಂದ ಸ್ವೀಕಾರ ಮಾಡಿದ್ದೇನೆ. ಬಾಕಿದ್ದೆಲ್ಲಾ ಕಾನೂನು ನೋಡುತ್ತದೆ. ಕಾನೂನು ಏನು ಹೇಳುತ್ತದೆಯೋ ಅದು ಆಗುತ್ತದೆ” ಎಂದು ಕೆಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.

ಬಳಿಕ ವರದಿಗಾರರು ‘ಸಿಎಂ ಅವರ ಕಡೆಯಿಂದ ತಪ್ಪಾಗಿದೆ ಎಂದು ನಿಮಗೆ ಅನಿಸುತ್ತಿದೆಯಾ’ ಎಂದು ಪ್ರಶ್ನಿಸಿದಾಗ ಸಚಿವರು “ಬಿಡು ಗುರು. ಒಂದು ಕುಟುಂಬ ಅಂದ ಮೇಲೆ ಐದು ಬೆರಳು ಒಂದೇ ಸಮ ಇದೆಯಾ? ಒಂದೊಂದು ಸಲ ಹೀಗೆ ಆಗುತ್ತದೆ. ಇಲ್ಲಿ ನಮ್ಮ ಅವರ ಆತ್ಮೀಯತೆ ಎಂಬುದಕ್ಕಿಂತ ಹೆಚ್ಚಾಗಿ ಈ ಭಾಗದ ಜನರ ಋಣ ತಿರಿಸೋದು ಇದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಋಣ ತೀರಿಸಬೇಕಿದೆ.

ಸಿಎಂ ಬದಲಾವಣೆ ತೀರ್ಮಾನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತದೆ. ನಾವ್ಯಾರು ನಿರ್ಧಾರ ಮಾಡಲು. ಆದರೆ ನೀವೇನು ಹೇಳಿದ್ದರಲ್ಲ, ಆ ರೀತಿಯಾದರೆ ನನ್ನಕ್ಕಿಂತ ಜಾಸ್ತಿ ಆನಂದ ಪಡುವವರು ಬೇರೆ ಯಾರೂ ಇಲ್ಲ” ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿ ಎಂಬ ಬಯಕೆಯನ್ನು ಸೋಮಣ್ಣ ವ್ಯಕ್ತಪಡಿಸಿದರು. ಜತೆಗೆ “ಆ ತರದ ಸನ್ನಿವೇಶ, ಸಂದರ್ಭ ನಮಗೆ ಗೊತ್ತಿಲ್ಲ. ನಾನು ಆ ತರ ಸಣ್ಣತನದಲ್ಲಿ ಬೇರೆಯವರ ಬಗ್ಗೆ ಮಾತನಾಡುವ ವ್ಯಕ್ತಿ ಅಲ್ಲ” ಎಂದು ಹೇಳುತ್ತ ಮುಂದಕ್ಕೆ ತೆರಳಿದರು.

RELATED ARTICLES
- Advertisment -
Google search engine

Most Popular