ಬೆಂಗಳೂರು : ಕಲ್ಲು ಗಣಿ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯದಾದ್ಯಂತ ಗಣಿ ಬಂದ್ ಮಾಡಲಾಗುವುದು ಎಂದು ಯೂನಿಯನ್ ಅಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಅಧ್ಯಕ್ಷ ಡಿ.ಸಿದ್ದರಾಜುರವರು ಮಾತನಾಡಿ ಸರ್ಕಾರಕ್ಕೆ ಸಂದಾಯವಾಗಿರುವುದರಿಂದ ಮತ್ತೆ ಈಗಾಗಲೇ ರಾಜಧನ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲಿ ಹೊರಟಿರುವುದು ಸರಿಯಲ್ಲ. ಇದನ್ನು ಮಾಡಬಾರದು. ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಪಾವತಿಸಿಕೊಂಡು ಬಂದಿರುತ್ತಾರೆ. ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ ಈಗಾಗಲೇ ಸಂದಾಯವಾಗಿರುತ್ತದೆ. ಆದ್ದರಿಂದ ಮತ್ತೆ ಗಣಿಗುತ್ತಿಗೆದಾರರಿಂದ ವಸೂಲಿ ಮಾಡಬಾರದು. ಕೆ.ಎಂ.ಎಂ.ಸಿ.ಆರ್-1994 ನಿಯಮಗಳಿಗೆ ಸಮರ್ಪಕ ತಿದ್ದುಪಡಿಗಳನ್ನು ಮಾಡುವುದು ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುವುದಕ್ಕೆ ಪೂರಕವಾಗಿ ನಿಯಮಗಳು ಸಮರ್ಪಕವಾಗಿರುವುದಿಲ್ಲ. ಆದ್ದರಿಂದ ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿರುತ್ತದೆ.
ನಿಯಮಗಳ ಸಮರ್ಪಕ ತಿದ್ದುಪಡಿ ಆಗದೆ ಮುಂತಾದ ಕ್ರಮಗಳನ್ನು ಕೈಗೊಂಡರೆ ಉದ್ಯಮವನ್ನು ನಡೆಸುವುದು ಅಸಾಧ್ಯವಾಗುತ್ತದೆ. ಮಾತ್ರವಲ್ಲದೆ ಅಭಿವೃದ್ಧಿ ಕೆಲಸಗಳಿಗೂ ಅಡಚಣೆಯಾಗುತ್ತದೆ. ಸರ್ಕಾರ ಕ್ಯಾಬಿನೆಟ್ ಉಪಸಮಿತಿಯ ತೀರ್ಮಾನದಂತೆ ಓಟಿಎಸ್ ಮಾಡಲು ತೀರ್ಮಾನಿಸಿದ್ದು ಹಾಗೂ ಮಾಲೀಕರಿಗೆ ಕೋಟ್ಯಾಂತರ ರೂಪಾಯಿ ದಂಡ ಹಾಕಿರುವುದನ್ನು ಖಂಡಿಸಿ ಹಾಗೂ ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ವಿರೋಧಿಸುತ್ತದೆ. ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಎಲ್ಲಾ ಕಷರ್ ಘಟಕಗಳನ್ನು ಮತ್ತು ಕಟ್ಟಡ ಕಲ್ಲು ಗಣಿಗಾರಿಕೆಗಳನ್ನು ಮುಚ್ಚಿ ರಾಜ್ಯಾದ್ಯಂತ ಬಂದ್ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಯೂನಿಯನ್ ಅಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ವತಿಯಿಂದ ಸಮಸ್ಯೆಗಳು ಕುರಿತು ಡಿ.ಸಿದ್ದರಾಜು, ಗೌರವಾಧ್ಯಕ್ಷ ಸಂಜೀವ್ ವಿ.ಹಟ್ಟಿಹೊಳಿ, ಉಪಾಧ್ಯಕ್ಷರುಗಳಾದ ವಾಗೀಶ್, ಅಬ್ದುಲ್ ಮಜಿದ್ದ, ಮನೋಜೆ ಶೆಟ್ಟರ್, ಪಂಚಮಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಸಿ.ಎಸ್.ಭಾಸ್ಕರ್, ಉಪ ಕಾರ್ಯದರ್ಶಿ ಡಿ.ಆರ್.ಮಹೇಶ್, ಸಂಘಟನಾ ಕಾರ್ಯದರ್ಶಿ ಕೆ.ವಿ.ಚೌಧರಿ, ಕೋಶಾಧಿಕಾರಿ ಉಮಾಶಂಕರಯ್ಯ, ಎಲ್ಲ 26 ಜಿಲ್ಲೆಯ ಅಧ್ಯಕ್ಷರು ನಿರ್ದೇಶಕರುಗಳು ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.



