Sunday, May 25, 2025
Google search engine

Homeರಾಜ್ಯಸುದ್ದಿಜಾಲಚುನಾವಣೆಯಲ್ಲಿ ಗೆಲ್ಲಿಸಿದರೆ ಮೇಕೆದಾಟು ಯೋಜನೆ ಮಾಡುತ್ತೇವೆ ಎನ್ನುವುದು ವಿಷಾಧನೀಯ: ನಿಂಗೇಗೌಡ(ಎನ್‌ಜಿ)

ಚುನಾವಣೆಯಲ್ಲಿ ಗೆಲ್ಲಿಸಿದರೆ ಮೇಕೆದಾಟು ಯೋಜನೆ ಮಾಡುತ್ತೇವೆ ಎನ್ನುವುದು ವಿಷಾಧನೀಯ: ನಿಂಗೇಗೌಡ(ಎನ್‌ಜಿ)

ಚನ್ನಪಟ್ಟಣ: ಮೇಕೆದಾಟು ಅಣೆಕಟೆ ನಿರ್ಮಾಣ ಹಾಗೂ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಮಳೆ ಆಧಾರಿತ ಸಂಕಷ್ಟ ಸೂತ್ರ ರಚಿಸುವುದು ರಾಜ್ಯದ ಜನಯತೆಯ ಮತ ಪಡೆಯುವ ಪ್ರತಿಯಿಬ್ಬ ಜನಪ್ರತಿನಿಧಿಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಆದರೆ ತುಮಕೂರಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಸೋಮಣ್ಣ ಅವರನ್ನು ಗೆಲ್ಲಿಸಿದರೆ ನಾನು ಪ್ರಧಾನಿ ಮೋದಿ ಅವರ ಬಳಿ ಮೇಕೆದಾಟು ಅಣೆಕಟ್ಟೆ ಬಗ್ಗೆ ಮಾತನಾಡುತ್ತೇನೆ ಎನ್ನುವುದು ವಿಷಾಧನೀಯ ಹಾಗೂ ಬ್ಲ್ಯಾಕ್ ಮೇಲ್ ತಂತ್ರವೇ ಎಂಬ ಅನುಮಾನ ಕಾಡುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ನಿಂಗೇಗೌಡ(ಎನ್‌ಜಿ) ಅವರು ವಿಷಾಧಿಸಿದರು.

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಮಂಗಳವಾರ ನಡೆದ ೧೯೫ ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿದ ಅವರು ದೇಶದ ಮಾಜಿ ಪ್ರಧಾನಿಯೊಬ್ಬರು ಮಣ್ಣಿನ ಮಗನಾಗಿ ಅವರ ಕಾಲದಲ್ಲಿ ದೇಶಕ್ಕೆ ಸಾಕಷ್ಟು ನೀರಾವರಿ ಯೋಜನೆ ನೀಡಿ ಎಲ್ಲರ ಮಣ್ಣಿನ ಮಗ ಎಂದೇ ಖ್ಯಾತರಾಗಿದ್ದಾರೆ. ಅಂತಹ ದೇವೇಗೌಡರು ಇಂದು ಸ್ವಾರ್ಥ ರಾಜಕಾರಣಕ್ಕಾಗಿ ರಾಜ್ಯದ ಜನತೆಯೆ ಹಿತ ಕಾಯುವುದನ್ನು ಬಿಟ್ಟು ತಮ್ಮ ಅಭ್ಯರ್ಥಿ ಗೆದ್ದರೆ ಮಾತ್ರ ಮೋದಿ ಅವರ ಬಳಿ ಮೇಕೆದಾಟು ಅಣೆಕಟ್ಟೆ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡುವುದು ನಿಜಕ್ಕೂ ನಮ್ಮ ದೌರ್‌ಭಾಗ್ಯವೇ ಆಗಿದೆ. ಕಾರಣ ದೇವೇಗೌಡರು ಈಗಲೂ ಕೇಂದ್ರದ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಅಲ್ಲದೆ ಅವರ ಮೊಮ್ಮಗ ಸಂಸದರಾಗಿದ್ದಾರೆ. ಇಷ್ಟಾಗಿದ್ದರೂ ಅವರು ಸೇರಿದಂತೆ ರಾಜ್ಯದಿಂದ ಆಯ್ಕೆಯಾಗಿ ೫ ವರ್ಷ ಅಧಿಕಾರ ಮಾಡಿರುವ ಬಿಜೆಪಿಯ ೨೫ ಸಂಸದರು ಸಹ ಈವರೆಗೆ ಮೋದಿ ಅವರ ಬಳಿ ಇರಲಿ ಸಂಸತ್‌ನಲ್ಲಿ ನಮ್ಮ ರಾಜ್ಯದ ನೀರಿನ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಆದರೆ ಇಂದು ಅಧಿಕಾರ ಕೊಟ್ಟರೆ ಮಾತನಾಡುತ್ತೇನೆ ಎಂದರೆ ಮಣ್ಣಿನ ಮಗನಿಗೆ ರಾಜ್ಯದ ಜನತೆಗಿಂತ ಅಧಿಕಾರವೇ ಮುಖ್ಯವೇ. ಅಥವಾ ಮೋದಿ ಅವರು ಈ ರೀತಿ ಷರತ್ತು ಹಾಕಿದ್ದಾರಾ. ಅಥವಾ ದೇವೇಗೌಡರಿಗೆ ಪ್ರಧಾನಿ ಮೋದಿ ಅವರು ಗೌರವ ನೀಡುತ್ತಾರೆ ಎಂಬುದು ಬೂಟಾಟಿಕೆಯ ಮಾತೆ ಎಂಬ ಅನುಮಾನ ಕಾಡುತ್ತಿದೆ. ಆದರೂ ಈ ಸಂದರ್ಭದಲ್ಲಾದರೂ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಮಾಡುವ ಭರವಸೆ ನೀಡಿರುವುದು ಸಹ ಸ್ವಾಗತಾರ್ಹವಾಗಿದೆ ಎಂದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಮಾತನಾಡಿ, ರಾಜ್ಯದಲ್ಲಿ ನೀರಾವರಿ ಸಮಸ್ಯೆಗಳ ವಿರುದ್ಧ ವೇದಿಕೆ ನಿರಂತರವಾಗಿ ದ್ವನಿ ಎತ್ತುತ್ತಾ ಬಂದಿದೆ. ಅದೇ ನಿಟ್ಟಿನಲ್ಲಿ ಕಾವೇರಿ ನೀರು ಹಂಚಿಕೆಯಲ್ಲಿ ಕೊಡಗಿನ ಮಳೆಆಧಾರಿತ ಸಂಕಷ್ಟ ಸೂತ್ರ ರಚಿಸುವಂತೆ ಹಾಗೂ ಮೇಕೆದಾಟು ಅಣೆಕಟ್ಟೆ ಕಟ್ಟುವಂತೆ. ಹಾಗೂ ಈ ಎರಡು ಅಂಶಗಳಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ನುರಿತ ವಕೀಲರನ್ನು ನೇಮಕ ಮಾಡುವಂತೆ ಆಗ್ರಹಿಸಿ ಕಳೆದ ೧೯೫ ದಿನಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದೇವೆ. ಅಲ್ಲದೆ ಮಾತು ಬಾರದೆ ನೀರಿಗಾಗಿ ಪರಿತಪಿಸುವ ಪ್ರಾಣಿ, ಪಕ್ಷಿ ಜೀವ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಮನೆಗಳ ಮೇಲೆ ಮಣ್ಣಿನ ಬಟ್ಟಲಿನಲ್ಲಿ ನೀರಿಡುವಂತೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸಣ್ಣ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡುವ ಆಂದೋಲನಕ್ಕೆ ಚಾಲನೆ ನೀಡಿದ್ದೇವೆ. ಇದಕ್ಕೆ ಪಟ್ಟಣದ ಪ್ರದೇಶದಲ್ಲಿ ಹಲವರು ಕೈ ಜೋಡಿಸಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯ ಮಾಡದ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಹಾರಾಡುತ್ತಾ ನರ್ತನ ಮಾಡುತ್ತಿದ್ದ ನಮ್ಮ ರಾಷ್ಟ್ರ ಪಕ್ಷಿ ನವಿಲುಗಳು ನೀರಿನ ಸಮಸ್ಯೆಯಿಂದ ಪಟ್ಟದ ರಾಮನಗರ ಚನ್ನಪಟ್ಟಣ ಗಡಿಯಲ್ಲಿನ ವಿಭೂತಿ ಕೆರೆ ಗ್ರಾಮದಲ್ಲಿ ನಡೆದಿದ್ದು ನೀರಿಲ್ಲದೆ ಎರಡು ನವಿಲುಗಳು ಸಾವನ್ನರುವುದು ಅಮಾನವೀಯ ಘಟನೆಯಾಗಿದೆ ಎಂದು ರಮೇಶ್‌ಗೌಡರು ವಿಷಾಧಿಸಿದರು.

ನಮ್ಮ ದೇಶದ ರಾಷ್ಟ್ರ ಪಕ್ಷಿ ಎಂಬುದು ದೇಶದ ಲಾಂಛನಕ್ಕೆ ಸಮವಾಗಿದೆ. ಇಂತಹ ನವಿಲುಗಳ ಸಂತತಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಅರಣ್ಯ ಇಲಾಖೆ ಮೂಲಕ ಏನೇ ಯೋಜನೆ ಮಾಡಿದರೂ ನವಿಲುಗಳಿಗೆ ಕೆರೆಕಟ್ಟೆ, ಕಾಲುವೆಗಳಲ್ಲಿ ನೀರಿಲ್ಲದಿದ್ದರೆ ಅವು ಬದುಕಲು ಸಾಧ್ಯವೇ ಇಲ್ಲ. ಅಲ್ಲದೆ ಸತ್ತ ನವಿಲುಗಳನ್ನು ರಸ್ತೆಯಲ್ಲಿ ನಾಯಿಗಳು ಎಳೆದಾಟು ತಿಂದಿರುವುದು ಅಘೋರವಾಗಿದೆ. ಇಂದು ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ತರುವ ನಿಟ್ಟಿನಲ್ಲಿ ಪಾದಯಾತ್ರೆ ಮಾಡಿದ ಜಿಲ್ಲೆಯಲ್ಲೇ ಈ ರೀತಿ ನವಿಲುಗಳು ಸಾವನ್ನಪ್ಪಿರುವುದು ನೋವಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಗ್ರಾಮ ಪಂಚಾಯ್ತಿಗಳ ಮೂಲಕ ಕಾಡಂಚಿನ ಹಳ್ಳಿಗಳಲ್ಲಿ ಸೀಮೆಂಟ್ ತೊmಟ್ಟಿಗಳನ್ನು ನಿರ್ಮಿಸಿ ನೀರನ್ನು ತುಂಬಿಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ರಂಜಿತ್‌ಗೌಡ, ಬೆಳಕು ಶ್ರೀಧರ್, ರಾಮಕೃಷ್ಣಪ್ಪ, ರ್‍ಯಾಂಬೋ ಸೂರಿ, ರಾಜು, ಸಿದ್ದಪ್ಪಾಜಿ, ಆರ್. ಶಂಕರ್ ಇತರರು ಇದ್ದರು.

RELATED ARTICLES
- Advertisment -
Google search engine

Most Popular