Saturday, May 24, 2025
Google search engine

Homeರಾಜ್ಯಅಕ್ರಮವಾಗಿ ಅರವಿಂದ್ ಕೇಜ್ರಿವಾಲ್ ಬಂಧನ: ಪ್ರತಿಭಟನೆಗೆ ಬೆಂಬಲಿಸುವಂತೆ ಮುಖ್ಯಮಂತ್ರಿ ಚಂದ್ರು ಕರೆ

ಅಕ್ರಮವಾಗಿ ಅರವಿಂದ್ ಕೇಜ್ರಿವಾಲ್ ಬಂಧನ: ಪ್ರತಿಭಟನೆಗೆ ಬೆಂಬಲಿಸುವಂತೆ ಮುಖ್ಯಮಂತ್ರಿ ಚಂದ್ರು ಕರೆ

ಬೆಂಗಳೂರು: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ  ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನ ನಿನ್ನೆ ಇಡಿ ಅಧಿಕಾರಿಗಳು ಬಂಧಿಸಿದ್ದು ಈ ಕುರಿತು ಅಮ್ ಆದ್ಮಿ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ದೇಶದಾದ್ಯಂತ ಆಪ್ ಪ್ರತಿಭಟನೆಗೆ ಕರೆ ನೀಡಿದೆ. ಈ ವಿಚಾರವಾಗಿ ಇಂದು ಮಾತನಾಡಿರುವ ಆಪ್ ರಾಜ್ಯಾಧ್ಯಕ್ಷ  ಮುಖ್ಯಮಂತ್ರಿ ಚಂದ್ರು, ಕೇಜ್ರಿವಾಲರನ್ನ ಅಕ್ರಮವಾಗಿ ಬಂಧಿಸಲಾಗಿದೆ. ಐಟಿ ಇಡಿ ಸಂಸ್ಥೆಗಳು ಮೋದಿ,  ಅಮಿತ್ ಶಾ ಕಪಿಮುಷ್ಠಿಯಲ್ಲಿವೆ.  ಚುನಾವಣಾ ಸಮಯದಲ್ಲಿ ಬಂಧಿಸಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಜ್ರಿವಾಲ್ ಬಂಧನ ಖಂಡಿಸಿ ಕರಾಳ ದಿನ ಆಚರಣೆ ಮಾಡಲಾಗುತ್ತಿದೆ.  ಚುನವಣೆ ಬಾಂಡ್  ವಿಚಾರ ಮರೆ ಮಾಚಲು ಕೇಜ್ರಿವಾಲ್ ರನ್ನ ಬಂಧಿಸಲಾಗಿದೆ. ಹೀಗಾಗಿ ಇಂಡಿಯಾ ಕೂಟ  ಒಟ್ಟಾಗಿ ಇರಬೇಕು. ಕಾಂಗ್ರೆಸ್ ನಾಯಕರು ಪ್ರತಿಭಟನೆಗೆ ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.

RELATED ARTICLES
- Advertisment -
Google search engine

Most Popular